ಹೊಸದಿಗಂತ ಡಿಜಿಟಲ್ ಡೆಸ್ಕ್
ಪಶ್ಚಿಮ ಬಂಗಾಳದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಬೆಡ್ ಕೆಳಗೆ, ಕಾರಿನಲ್ಲಿ ಹಾಗೂ ರಟ್ಟಿನ ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ ಕೋಟಿಗಟ್ಟಲೆ ನಗದು ಹಣ ಪತ್ತೆಯಾಗಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯ ರಾಜಧಾನಿ ಕೋಲ್ಕತ್ತಾದ ಉಪ ನಗರವಾದ ಹೌರಾದಲ್ಲಿ ಇಬ್ಬರು ಸಹೋದರರಿಗೆ ಸೇರಿದ ಅಪಾರ್ಟ್‌ಮೆಂಟ್‌ಗಳಿಂದ ಪೊಲೀಸರು ಸುಮಾರು ₹ 8 ಕೋಟಿ ವಶಪಡಿಸಿಕೊಂಡಿದ್ದಾರೆ. ಸೈಲೇಶ್ ಪಾಂಡೆ, ಅರವಿಂದ್ ಪಾಂಡೆ, ರೋಹಿತ್ ಪಾಂಡೆ ಮತ್ತು ಅವರ ಸಹಚರರಲ್ಲಿ ಒಬ್ಬರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿರುವ ಅವರ ಅಪಾರ್ಟ್‌ಮೆಂಟ್‌ನ ಹೊರಗೆ ನಿಲ್ಲಿಸಿದ್ದ ಅವರ ಕಾರಿನಲ್ಲೇ ಸುಮಾರು ₹ 2 ಕೋಟಿ ನಗದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಅಪಾರ್ಟ್‌ಮೆಂಟ್‌ನ ಬೆಡ್ ಕೆಳಗೆ, ರಟ್ಟಿನ ಬಾಕ್ಸ್ಗಳಲ್ಲೂ ಹಣವನ್ನು ತುಂಬಿಸಿಟ್ಟಿದ್ದರು. ಉದ್ಯಮಿಗಳಾದ ಸೈಲೇಶ್ ಪಾಂಡೆ ಮತ್ತು ಅರವಿಂದ್ ಪಾಂಡೆ ಶಿಬ್‌ಪುರ ಪ್ರದೇಶದಲ್ಲಿನ ದುಬಾರಿ ವಸತಿ ಸಮುಚ್ಚಯದಲ್ಲಿ ಫ್ಲಾಟ್‌ಗಳನ್ನು ಹೊಂದಿದ್ದರು. ಕೋಲ್ಕತ್ತಾ ಪೊಲೀಸರ ಪ್ರಕಾರ, ಇಬ್ಬರು ಉದ್ಯಮಿಗಳು ಬಾರಿ ಮೊತ್ತದ ಅಕ್ರಮ ವಹಿವಾಟು ನಡೆಸಿದ ಬಗ್ಗೆ ಎರಡು ಬ್ಯಾಂಕುಗಳು ಅಕ್ಟೋಬರ್ 14 ರಂದು ಕೋಲ್ಕತ್ತಾ ಪೊಲೀಸರಿಗೆ ಎಚ್ಚರಿಕೆ ನೀಡಿದ ನಂತರ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ