ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಪಿಆರ್ ಅಧ್ಯಯನಕ್ಕಾಗಿ ಸರ್ಕಾರವೇ ರಚಿಸಿದ ಸಮಿತಿ ಇದೀಗ ಡಿಪಿಆರ್‌ನಲ್ಲಿ ಲೋಪದೋಷಗಳನ್ನು ಪತ್ತೆಹಚ್ಚಿದ್ದನ್ನು ಪ್ರಶ್ನಿಸಿ ಸಂಸದ ಪಿಸಿ ಮೋಹನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಟನಲ್ ಡಿಪಿಆರ್ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವೇ ನಗರಾಭಿವೃದ್ಧಿ ಇಲಾಖೆಯ ಐವರ ತಜ್ಞರ ಸಮಿತಿ ರಚನೆ ಮಾಡಿತ್ತು. ಈಗ ಆ ಸಮಿತಿಯೇ ಡಿಪಿಆರ್‌ನಲ್ಲಿ ಇರುವ ಲೋಪದೋಷಗಳನ್ನ ಪತ್ತೆಹಚ್ಚಿದೆ.
ಈ ಕುರಿತು ಸಂಸದ ಪಿಸಿ ಮೋಹನ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ ಒಂದು ತಿಂಗಳ ಹಿಂದೆ ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ಮಾರ್ಗದ ನ್ಯೂನತೆಗಳನ್ನ ಬಿಚ್ಚಿಟ್ಟಿದ್ದೆ. ಆದರೆ ಇದೀಗ ಸರ್ಕಾರ ರಚಿಸಿದ ತಜ್ಞರ ಸಮಿತಿಯೇ ಡಿಪಿಆರ್ ಲೋಪದೋಷಗಳನ್ನ ಪತ್ತೆ ಹಚ್ಚಿದೆ. ವರದಿಯಲ್ಲಿ ದುಬಾರಿ ವೆಚ್ಚ, ಅಸಮರ್ಪಕ, ಭೂ ಅವೈಜ್ಞಾನಿಕ ವಿಚಾರವಾಗಿ ತಜ್ಞರು ಉಲ್ಲೇಖಿಸಿದ್ದಾರೆ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಿದ್ದಾರೆ ಎಂದು ಹೇಳಿರುವ ಸಮಿತಿ ಟನಲ್ ದೊಡ್ಡ ಯೋಜನೆ ಕೇವಲ 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. ಇದು ಸಾಕಾಗಲ್ಲ ಎಂದು ತಿಳಿಸಿದೆ. ಹೆಬ್ಬಾಳ – ಸಿಲ್ಕ್ ಬೋರ್ಡ್ಗೆ ರೆಡ್‌ಲೈನ್ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಏಕೆ? ಲಾಲ್ ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ ಅಂತಲೂ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.