ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಅಲಮೇಲಮ್ಮ, ಕವಲು ದಾರಿಯಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಿಷಿ ಇದೀಗ ರಾಮನ ಅವತಾರ ತಾಳಿದ್ದಾರೆ. ಹೌದು, ರಾಮ ನವಮಿ ಪ್ರಯುಕ್ತ ಹೊಸ ಚಿತ್ರದ ಮೊದಲ ನೋಟವನ್ನು ನಟ ಹಂಚಿಕೊಂಡಿದ್ದಾರೆ.
ಥೇಟ್ ರಾಮನ ವೇಷ ಧರಿಸಿರುವ ರಿಷಿ ಮತ್ತೊಂದು ಪ್ರಯೋಗಾತ್ಮಕ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಅವರ ಮುಂದಿನ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ.
ಅಲ್ಲದೇ ಸದ್ಯದಲ್ಲೇ ಕೆಣಕು ನೋಟ (ಟೀಸರ್) ಬಿಡುಗಡೆ ಮಾಡುವ ಬಗ್ಗೆಯೂ ತಿಳಿಸಿದ್ದಾರೆ. ಶೀಘ್ರದಲ್ಲೇ ಚಿತ್ರದ ಟೀಸರ್ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದರು
ರಿಷಿಯ ರಾಮನ ಅವತಾರಕ್ಕೆ ಇಬ್ಬರು ನಾಯಕಿಯರಿದ್ದಾರೆ. ವಜ್ರಕಾಯ ಸಿನಿಮಾ ಖ್ಯಾತಿಯ ಶುಭ್ರ ಅಯ್ಯಪ್ಪ ಹಾಗೂ ಪ್ರಣಿತ ಸುಭಾಷ್. ಅರುಣ್ ಸಾಗರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರಲಿದ್ದಾರೆ. ಜೂಡೊ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ಉಡುಪಿ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಜೂನ್ ಮೊದಲ ವಾರ ಸಿನಿಮಾ ತೆರೆ ಕಾಣಲು ಚಿತ್ರತಂಡ ಯೋಜಿಸಿದೆ.
Let the spirit of Sri Rama inspire us to be the best version of ourselves and make a positive impact in the world.
We are proud to pay a tribute to his legacy.Teaser coming soon!!!
Wishing everybody a very happy Ramanavami 🤗 #RamaIsAGentleman #RamarajyaMatteShuru pic.twitter.com/i2riHRYsvr
— Rishi (@Rishi_vorginal) March 30, 2023