ಬೈಕ್ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು

ಹೊಸ ದಿಗಂತ ವರದಿ, ರಾಮನಗರ:

ಚಲಿಸುತ್ತಿದ್ದ ಬೈಕ್​ ಮೇಲೆ ಮರ ಬಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಕಿರಣ್ (29) ಮೃತ ದುರ್ದೈವಿ. ರಾಮನಗರ ತಾಲೂಕಿನ ಅಕ್ಕೂರು ಗ್ರಾಮದ ಕೆನರಾ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್​ ಅಕ್ಕೂರು ಗ್ರಾಮದಿಂದ ರಾಮನಗರಕ್ಕೆ ಬೈಕ್​ನಲ್ಲಿ ಬರುತ್ತಿದ್ದ.
ಮಳೆ ಹಿನ್ನೆಲೆ ನಿನ್ನೆ ರಾತ್ರಿ ಬಿರುಗಾಳಿ ಜೋರಾಗಿತ್ತು. ಕಿರಣ್​ ಇದ್ದ ಬೈಕ್​ ಮೇಲೆ ರಸ್ತೆಬದಿಯ ಮರ ಬಿದ್ದಿದೆ. ಗಂಭೀರ ಗಾಯಗೊಂಡ ಕಿರಣ್​ ಸ್ಥಳಕ್ಕೆ ಕೊನೆಯುಸಿರೆಳೆದರು.
ಆಂಧ್ರಪ್ರದೇಶದ ವಿಜಯವಾಡ ಮೂಲದ ಕಿರಣ್​, ರಾಮನಗರ ಟೌನ್​ನಲ್ಲಿ ಪತ್ನಿ ಮತ್ತು ಮಗು ಜತೆ ವಾಸವಿದ್ದರು. ಕಿರಣ್​ ಸಾವಿನ ಸುದ್ದಿ ಕೇಳಿ ಕಿರಣ್​ರ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!