ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನೂನಾತ್ಮಕ ಹೋರಾಟ ಮುಗಿದ ನಂತರ ನಾನು ಧರ್ಮಸ್ಥಳಕ್ಕೆ ಬರುತ್ತೇನೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಹೇಳಿದ್ದಾರೆ.
ಧರ್ಮಸ್ಥಳಕ್ಕೆ ಬಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಎಂದು ಸಚಿವರು ಎಸೆದ ಸವಾಲಿಗೆ ಪ್ರತಿಕ್ರಿಯಿಸಿದ ರವಿ, ಕಾನೂನಾತ್ಮಕ ಹೋರಾಟ ಮುಗಿದ ಬಳಿಕ ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ. ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗಿ ಹರಕೆ ತೀರಿಸುತ್ತೇನೆ ಎಂದು ಸಿ.ಟಿ.ರವಿ ಹೇಳಿದರು. ಆಣೆ ಮಾಡಲು ಲಕ್ಷ್ಮೀ ಹೆಬ್ಬಾಳಕರ ಅವರು ಧರ್ಮಸ್ಥಳಕ್ಕೆ ಕರೆದಿದ್ದಾರೆ. ಪ್ರಕರಣ ಈಗ ತನಿಖಾ ಹಂತದಲ್ಲಿ ಇದೆ. ಎಲ್ಲವೂ ಮುಗಿದ ಬಳಿಕ ಹೋಗುತ್ತೇನೆ’ ಎಂದರು.
ನನ್ನೊಂದಿಗೆ ಅಮಾನವೀಯವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅಮಾನತುಗೊಳಿಸಬೇಕು. ಡಿ.19ರಂದು ಸುವರ್ಣ ವಿಧಾನಸೌಧದಲ್ಲಿ ದಾರುಣ ಘಟನೆ ನಡೆದಿದ್ದು, ದಾಳಿಕೋರರ ವಿರುದ್ಧ ನಾನು ದೂರು ನೀಡಿದ್ದರೂ ಇಂದಿಗೂ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸರು ಆದೇಶವಿಲ್ಲದೆ, ಅಪರಾಧಿಯಂತೆ ನನ್ನನ್ನು ಬಂಧಿಸಿದರು.