ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರ ಏರಿಳಿತ ಕಾಣಿಸುತ್ತಿದ್ದು, ಇಂದು ಮತ್ತೊಮ್ಮೆ ಬೆಲೆಯಲ್ಲಿ ಬದಲಾವಣೆ ಕಾಣ್ತಿದೆ. ನಿನ್ನೆ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಖರೀದಿಸಲು ಕಾಯುತ್ತಿದ್ದವರಿಗೆ ಇದು ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.
ಇಂದಿನ ದರದ ಪ್ರಕಾರ ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,382 ರೂ ಆಗಿದ್ದು, 22 ಕ್ಯಾರಟ್ ಚಿನ್ನ 14,100 ರೂಗೆ ತಲುಪಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ದರ 1,41,000 ರೂ ಆಗಿದ್ದು, 24 ಕ್ಯಾರಟ್ ಚಿನ್ನದ ದರ 1,53,820 ರೂ ಆಗಿದೆ. ಬೆಂಗಳೂರಿನಲ್ಲೂ ಇದೇ ದರಗಳು ಅನ್ವಯವಾಗುತ್ತಿವೆ.
ಇದನ್ನೂ ಓದಿ:
ಬೆಳ್ಳಿ ದರದಲ್ಲೂ ಸ್ವಲ್ಪ ಬದಲಾವಣೆ ಕಂಡುಬಂದಿದ್ದು, ಪ್ರತಿ ಗ್ರಾಂ ಸುಮಾರು 255ರೂ ಮಟ್ಟದಲ್ಲಿ ವಹಿವಾಟಾಗುತ್ತಿದೆ. ಕೆಲವು ನಗರಗಳಲ್ಲಿ ಇದು 260ರೂ ರವರೆಗೆ ದಾಖಲಾಗಿದೆ. ಚೆನ್ನೈ ಮತ್ತು ಕೇರಳ ಭಾಗಗಳಲ್ಲಿ ಬೆಳ್ಳಿ ದರ ಸ್ವಲ್ಪ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆ, ಡಾಲರ್ ಮೌಲ್ಯ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆ ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಭರಣ ಖರೀದಿಸುವವರು ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಅಂತಿಮ ದರವನ್ನು ಪರಿಶೀಲಿಸಿ ಖರೀದಿ ಮಾಡುವಂತೆ ಸಲಹೆ ನೀಡಲಾಗಿದೆ.



