ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ, ಸಂಸದೆ ಸುಮಲತಾ (Sumalatha Ambareesh) ಅವರ 60ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆ ನಡೆದ ಸ್ಯಾಂಡಲ್ವುಡ್ ತಾರೆಯರು ಸಾಕ್ಷಿಯಾಗಿದ್ದಾರೆ.
ಸುಮಲತಾ ಹುಟ್ಟುಹಬ್ಬವನ್ನು ಶನಿವಾರ (ಆಗಸ್ಟ್ 26) ರಾತ್ರಿಯೇ ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ಮಾಡಲಾಗಿದೆ. ಕನ್ನಡ ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಎಲ್ಲರನ್ನೂ ಅಂಬರೀಷ್ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಈ ವೇಳೆ ಸುದೀಪ್- ದರ್ಶನ್ (Darshan) ಮುಖಾಮುಖಿ ಕೂಡ ಆಗಿದ್ದು, ಇಬ್ಬರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಇಬ್ಬರು ಮತ್ತೆ ಒಂದಾಗಿದ್ದರೋ ಎಂಬ ಪ್ರಶ್ನಿಗಳಿಗೆ ನಟಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.
ಇದು ನಮ್ಮ ವೈಯಕ್ತಿಕ ಬದುಕಿನ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇನೆ. ಅವರು ಬೇರೇ ರೀತಿಯಲ್ಲಿ ಇರೋಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋ ಹಾಗೆ ಇರುತ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ, ಇದು ತೀರಾ ಪರ್ಸನಲ್ ವಿಚಾರ ಎಂದು ಸುಮಲತಾ ಮಾತನಾಡಿದ್ದಾರೆ.
ಪಾರ್ಟಿ ಫೋಟೋ ವೈರಲ್ ಬೆನ್ನಲ್ಲೇ ಕಿಚ್ಚ-ದಚ್ಚು ರಾಜಿ ಸಂಧಾನ ನಡೆದಿದೆ ಎನ್ನಲಾಗಿತ್ತು. ಸುಮಲತಾ ಅವರೇ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಹೇಳಲಾಗಿತ್ತು.