September 28, 2026
Monday, September 28, 2026
spot_img

ಮಲೆನಾಡು-ಕರಾವಳಿಯಹೆಲ್ತ್ ಡ್ರಿಂಕ್: ದೃಷ್ಟಿ ದೋಷ ನಿವಾರಿಸುವ ಒಂದೆಲಗ ತಂಬುಳಿಯ ಪವರ್ ಗೊತ್ತಾ?

ಒಂದೆಲಗ ಎನ್ನುವುದು ಮಲೆನಾಡು ಮತ್ತು ಕರಾವಳಿ ಭಾಗದ ಅತ್ಯಂತ ಪೌಷ್ಟಿಕ ಹಾಗೂ ಸಾಂಪ್ರದಾಯಿಕ ಆಹಾರವಾಗಿದೆ. ಒಂದೆಲಗ ಸೊಪ್ಪು ಮೆದುಳಿನ ಕಾರ್ಯಕ್ಷಮತೆ, ನೆನಪಿನ ಶಕ್ತಿ ಮತ್ತು ದೃಷ್ಟಿ ದೋಷ ನಿವಾರಣೆಗೆ ರಾಮಬಾಣ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಮತ್ತು ಹಿರಿಯರ ದೇಹದ ಉಷ್ಣತೆ ಕಡಿಮೆ ಮಾಡಲು ವಾರಕ್ಕೆ ಒಮ್ಮೆಯಾದರೂ ಈ ತಂಬುಳಿಯನ್ನು ಬಿಸಿ ಅನ್ನದ ಜೊತೆ ತಿನ್ನಬೇಕು.

ಬೇಕಾಗುವ ಸಾಮಾಗ್ರಿಗಳು:
ಒಂದೆಲಗ ಸೊಪ್ಪು
ಜೀರಿಗೆ
ಕಾಳುಮೆಣಸು
ತೆಂಗಿನಕಾಯಿ ತುರಿ
ಮಜ್ಜಿಗೆ ಅಥವಾ ಗಟ್ಟಿ ಮೊಸರು
ತುಪ್ಪ
ಸಾಸಿವೆ
ಜೀರಿಗೆ
ಒಣಮೆಣಸಿನಕಾಯಿ
ಕರಿಬೇವಿನ ಸೊಪ್ಪು
ಉಪ್ಪು

ಮಾಡುವ ವಿಧಾನ :
ಮೊದಲು ಒಂದು ಸಣ್ಣ ಬಾಣಲೆಯಲ್ಲಿ ಅರ್ಧ ಚಮಚ ತುಪ್ಪ ಕಾಯಿಸಿ ಜೀರಿಗೆ ಮತ್ತು ಕಾಳುಮೆಣಸನ್ನು ಸ್ವಲ್ಪ ಹುರಿಯಬೇಕು. ನಂತರ ಅದಕ್ಕೆ ತೊಳೆದು ಇಟ್ಟುಕೊಂಡ ಒಂದೆಲಗ ಸೊಪ್ಪನ್ನು ಹಸಿಯಾಗಿಯೇ ಹಾಕಿ ಕೇವಲ 1 ನಿಮಿಷ ಲಘುವಾಗಿ ಬಾಡಿಸಿಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರ್‌ಗೆ ಬಾಡಿಸಿದ ಸೊಪ್ಪು, ಜೀರಿಗೆ, ಮೆಣಸು, ಹಸಿ ಕಾಯಿತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿದ ಹಸಿರು ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಮಜ್ಜಿಗೆ ಅಥವಾ ಮೊಸರನ್ನು ಸೇರಿಸಿ ಹದವಾಗಿ ಮಿಕ್ಸ್ ಮಾಡಿಬೇಕು. ಮತ್ತದೇ ಸಣ್ಣ ಬಾಣಲೆಯಲ್ಲಿ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಚಟಪಟ ಅಂತ ಸಿಡಿಸಿ ತಂಬುಳಿಗೆ ಸೇರಿಸಿದರೆ, ಅಮೃತದಂತಹ ಒಂದೆಲಗ ತಂಬುಳಿ ಸಿದ್ಧವಾಗುತ್ತದೆ.

Must Read