ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ “ಅಕ್ರಮ” ನಡೆದಿದೆ ಎಂಬ ಶಶಿ ತರೂರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಖಂಡನೆ ವ್ಯಕ್ತಪಡಿಸಿರುವ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ʼತರೂರ್ ಅವರಿಗೆ ಎರಡು ಮುಖಗಳಿವೆʼ ಎಂದು ಟೀಕಿಸಿದ್ದಾರೆ.
“ನಾವು ನಿಮ್ಮ ಮನವಿಗೆ ಮನ್ನಣೆ ನೀಡಿದ್ದೆವು. ಅದರ ಹೊರತಾಗಿಯೂ, ಕೇಂದ್ರ ಚುನಾವಣಾ ಪ್ರಾಧಿಕಾರವು ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ನೀವು ಮಾಧ್ಯಮಗಳ ಮುಂದೆ ಹೋಗಿದ್ದೀರಿ” ಎಂದು ಮಿಸ್ತ್ರಿ ಕಿಡಿಕಾರಿದ್ದಾರೆ. ಉತ್ತರ ಪ್ರದೇಶ ಮತ್ತು ಪಂಜಾಬ್ ಮತ್ತು ತೆಲಂಗಾಣದಲ್ಲಿ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ತರೂ ರ್ ಆರೋಪಿಸಿದ್ದರು.
ತಿರುವನಂತಪುರಂ ಸಂಸದ ತರೂರ್ ವಿರುದ್ಧ ವಾಗ್ದಾಳಿ ನಡೆಸಿದ ಮಿಸ್ತ್ರಿ, ಅಕ್ರಮಗಳ ಕುರಿತಾದ ತನಿಖೆಯಿಂದ ತೃಪ್ತನಾಗಿದ್ದೇನೆ ಎಂದು ತರೂರ್ ನಮ್ಮಮುಂದೆ ಹೇಳಿದರೆ, ಮಾಧ್ಯಮಗಳ ಮುಂದೆ ವಿಭಿನ್ನ ಆರೋಪಗಳನ್ನು ಮಾಡಿದರು. “ನೀವು ಎರಡೆರೆಡು ಮುಖಗಳನ್ನು ಹೊಂದಿದ್ದೀರಿ ಎಂದು ಹೇಳಲು ನಾನು ವಿಷಾದಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ 20 ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆ 7,897 ಮತಗಳು ಮತ್ತು ತರೂರ್ 1,072 ಮತಗಳನ್ನು ಪಡೆದರೆ, 416 ಮತಗಳು ಅಸಿಂಧುವಾಗಿವೆ. ತರೂರ್ ಅವರನ್ನು ಭಾರಿ ಅಂತರದಿಂದ ಸೋಲಿಸಿದ ಖರ್ಗೆ ಅವರು ಎರಡು ದಶಕಗಳಲ್ಲಿ ಕಾಂಗ್ರೆಸ್‌ನ ಮೊದಲ ಗಾಂಧಿಯೇತರ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ