ದಿಗಂತ ವರದಿ ರಾಯಚೂರು :
ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಒಂದನೂರು ಕೋಟಿ ರೂಗಳ ವೆಚ್ಚದಲ್ಲಿ ವಿಮಾನ ನಿಲ್ದಾಣಗಳಲ್ಲಿ ಇರುವ ಎಲ್ಲ ಮೂಲಭುತ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಇದನ್ನು ಮಾದರಿ ರೈಲ್ವೆ ನಿಲ್ದಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ವಿವಿಧ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ೧೫ ಸಾವಿರಕೋಟಿಗಳ ವೆಚ್ಚವನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಎರಡು ಸಾವಿರ ಕೋಟಿರೂಗಳ ವೆಚ್ಚದಲ್ಲಿ ೬೬ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಮೊದಲನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಪ್ರಾರಂಭಿಕವಾಗಿ ಜಿಲ್ಲಾ, ತಾಲೂಕಾ ಕೇಂದ್ರಗಳಲ್ಲಿನ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಿ ನಂತರದಲ್ಲಿ ಹೋಬಳಿ ಕೇಂದ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಗೆದುಕೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ಪ್ರಯಾಣಿಕರಿಗೆ ರೈಲು ತಪ್ಪಿದ ಸಂದರ್ಭದಲ್ಲಿ ಇಂತಹ ಪ್ರಯಾಣಿಕರಿಗೆ ರಾತ್ರಿ ಸಮಯದಲ್ಲಿ ತಂಗುವುದಕ್ಕೆ ಬೇಕಾದ ವಸತಿ ಒದಗಿಸುವ ಆದ್ಯತೆಯಲ್ಲಿ ಒಂದಾಗಿದೆ. ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ರೈಲ್ವೆಯ ಪ್ರತ್ಯೇಕ ಆಯವ್ಯಯವನ್ನು ತಗೆದು ಸಾಮಾನ್ಯ ಆಯವ್ಯದಲ್ಲಿ ಜೋಡಣೆ ಮಾಡಿದ್ದರಿಂದ ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದಕ್ಕೆ ಮುಂದಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ರೈಲ್ವೆ ಇಲಾಖೆ ಇನ್ನು ಮುಂದೆ ಸಾಮಾನ್ಯ ಜನತೆಗೆ ದೊರಕುವುದಿಲ್ಲ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದರು ಆದರೆ ಪ್ರಧಾನಿ ಮೋದಿಯವರು ೨.೬೨ ಲಕ್ಷ ಕೋಟಿ ಅನುದಾನ ನೀಡುವ ಮೂಲಕ ಈ ಹಿಂದೆ ಯಾರೂ ನೀಡದಷ್ಟು ಅನುದಾನವನ್ನು ನೀಡುವ ಮೂಲಕ ರೈಲ್ವೆ ಇಲಾಖೆಯನ್ನು ಅಭಿವೃದ್ಧಿಯತ್ತ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಸಕ್ತ ಆಯವ್ಯಯದಲ್ಲಿ ರಾಜ್ಯದ ರೈಲ್ವೆ ಇಲಾಖೆಯ ಅಬಿವೃದ್ಧಿಗೆ ೭.೫ ಸಾವಿರ ಕೋಟಿ ರೂಗಳ ಅನುದಾನವನ್ನು ನೀಡಿದ್ದಾರೆ. ೨೦೧೪ರ ವರೆಗೂ ರಾಜ್ಯಕ್ಕೆ ೮.೭೫ ಸಾವಿರ ಕೋಟಿಗೂಗಳು ಮಾತ್ರ ಬರುತ್ತಿತ್ತು. ರಾಜ್ಯದಲ್ಲಿನ ರೈಲ್ವೆ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳನ್ನು ತಗೆದುಕೊಳ್ಳಲಾಗುತ್ತಿದೆ.
ಈ ಹಣದಲ್ಲಿ ಆದಷ್ಟು ಶೀಘ್ರ ಗದಗ -ಯಲವಿಗಿ ಹರಪನಹಳ್ಳಿ ಕೃಷ್ಣ ಗೋಕಾಕ ರಸ್ತೆ -ಯರಗಟ್ಟಿ-ಮುನವಳ್ಳಿ-ಸವದತ್ತಿ-ನರಗುಂದ-ಹೊಂಬಳ ಈ ನಾಲ್ಕು ಹೊಸ ರೈಲ್ವೇ ಮಾರ್ಗ ಯಾವುದಾದರೂ ಜಾರಿಗೆ ತರಲು ಯತ್ನಿಸಿ