Sunday, September 21, 2025

‘ಒನ್​ ನೇಷನ್, ಒನ್​ ಟ್ಯಾಕ್ಸ್​’ ಕನಸು ನನಸು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿ ಹಬ್ಬದ ಸಂಭ್ರಮಮನ್ನು ಪ್ರಧಾನಿ ಮೋದಿ ಡಬಲ್ ಮಾಡಿದ್ದಾರೆ. ದೇಶದ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ,ನವರಾತ್ರಿ ಮೊದಲ ದಿನದಿಂದ ಜಿಎಸ್​ಟಿ ಉತ್ಸವ (GST) ಆರಂಭವಾಗಲಿದೆ. ಜಿಎಸ್​ಟಿಯಿಂದ ನಿಮ್ಮೆಲ್ಲರ ಉಳಿತಾಯ ಶುರುವಾಗಲಿದೆ. ಎಲ್ಲ ವರ್ಗದ ಜನರಿಗೂ ಉಳಿತಾಯದ ಉತ್ಸವ ಪ್ರಾರಂಭವಾಗಲಿದೆ ಎಂದರು.

ನಾನು ಪ್ರಧಾನಿಯಾದ ಆರಂಭದಲ್ಲಿ ಒಂದು ಕಂಪನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ವಸ್ತುಗಳನ್ನು ಕಳುಹಿಸಲು ಕಷ್ಟಪಡುತ್ತಿತ್ತು. ಮೊದಲು ಬೆಂಗಳೂರಿನಿಂದ ಯುರೋಪ್ ಕಳುಹಿಸಿ ಬಳಿಕ ಹೈದರಾಬಾದ್‌ಗೆ ಬರುತ್ತಿತ್ತು. ವ್ಯಾಟ್‌, ಅಕ್ಟ್ರಾಯ್‌, ಅಬಕಾರಿ ಸುಂಕದಂತಹ ತೆರಿಗೆಗಳಿಂದ ಈ ಸಮಸ್ಯೆಯಾಗಿತ್ತು. ಈ ತೆರಿಗೆಯನ್ನು ಜನರು ಭರಿಸಬೇಕಿತ್ತು.ತೆರಿಗೆ ಮತ್ತು ಟೋಲ್​ನಿಂದ ಜನರಿಗೆ ಬಹಳ ತೊಂದರೆ ಆಗಿತ್ತು.

ಜನರ ಮತ್ತು ದೇಶದ ಹಿತಕ್ಕಾಗಿ ಎಲ್ಲಾ ರಾಜ್ಯಗಳು, ಸರ್ಕಾರಗಳ ಜೊತೆಗೆ ಚರ್ಚಿಸಿ 2017ರಲ್ಲಿ ಭಾರತದಲ್ಲಿ ಜಿಎಸ್​ಟಿ ಸುಧಾರಣೆ ಆರಂಭಿಸಲಾಗಿತ್ತು. ಈಗ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಜಾರಿ ಮಾಡಿದೆ. ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ. ಸಮಯ ಬದಲಾದಂತೆ ಪರಿಷ್ಕರಣೆ ಅಗತ್ಯ. ಈಗ 5% ಮತ್ತು 18% ಎರಡೇ ಸ್ಲ್ಯಾಬ್ ಗಳನ್ನು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಸುಮಾರು 99% ವಸ್ತುಗಳು 5% ತೆರಿಗೆಯ ಅಡಿ ಬಂದಿವೆ.

1 ವರ್ಷದಲ್ಲಿ 25 ಕೋಟಿ ಜನರ ಬಡತನವನ್ನು ನಿರ್ಮೂಲನೆ ಮಾಡಿದ್ದು ಅವರು ಮಧ್ಯಮ ವರ್ಗಕ್ಕೆ ಬಂದಿದ್ದಾರೆ. ಈ ಮಧ್ಯಮ ವರ್ಗಕ್ಕೆ ಅವರದ್ದೇ ಆದ ಕನಸುಗಳಿದೆ. ಅದಕ್ಕಾಗಿ 12 ಲಕ್ಷ ರೂ.ವರೆಗೂ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಲ್ಲಿ ದೊಡ್ಡ ಬದಲಾವಣೆ ಯಾಗಲಿದೆ. ಬಡವರು, ಮಧ್ಯಮ ವರ್ಗಕ್ಕೆ ಡಬಲ್ ಆಫರ್ ಸಿಕ್ಕಾಂತಾಗಿದೆ ಎಂದರು.

‘ಒನ್​ ನೇಷನ್, ಒನ್​ ಟ್ಯಾಕ್ಸ್​’ ಕನಸು ಈಡೇರಿದೆ. ಸಮಯ ಬದಲಾದಂತೆ ದೇಶದ ಅಗತ್ಯತೆ ಸಹ ಬದಲಾಗುತ್ತದೆ. ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್​ಟಿಯಲ್ಲಿ ಸುಧಾರಣೆ ಮಾಡಲಾಗಿದ್ದು, ಇದು ಹೊಸ ಪೀಳಿಗೆಗೆ ಸಹಕಾರಿಯಾಗಲಿದೆ. ಮಧ್ಯಮ ವರ್ಗದವರಿಗೆ ಸಹಕಾರ ಆಗಲಿದೆ. ರಾಜ್ಯದ ಅಭಿವೃದ್ಧಿಗೆ ಸಹಕಾರವಾಗಲಿದೆ. ಜಿಎಸ್​ಟಿ ಯಿಂದ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ನಾಳೆಯಿಂದ ಜಾರಿಗೆ ತರಲಾಗುವುದು. ಇದರಿಂದ ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ಭಾರತದ ಬೆಳವಣಿಗೆಯ ವೇಗಗೊಳಿಸುತ್ತವೆ’ ಎಂದು ಜಿಎಸ್‌ಟಿ ಸುಧಾರಣೆಯನ್ನ ಪ್ರಧಾನಿ ಮೋದಿ ಶ್ಲಾಘಸಿದರು.

ಕಳೆದ 11 ವರ್ಷಗಳಲ್ಲಿ ತಮ್ಮ ಸರ್ಕಾರದ ಅಡಿಯಲ್ಲಿ ಸುಮಾರು 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದರು. ಆದಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಜಿಎಸ್​ಟಿಯಿಂದ ಸಾಕಷ್ಟು ತೆರಿಗೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ನಾಳೆಯಿಂದ (ಸೆ. 22) ದೇಶದ ಜನರಿಗೆ ಉಳಿತಾಯದ ಉತ್ಸವವಾಗಲಿದೆ. ದೇಶದ ಜನರಿಗೆ ಜಿಎಸ್​ಟಿ ಮತ್ತು ಆದಾಯ ತೆರಿಗೆ ಇಳಿಕೆಯಿಂದ ಒಂದು ವರ್ಷದಲ್ಲಿ 2.5 ಲಕ್ಷ ಕೋಟಿ ರೂ ಉಳಿತಾಯವಾಗಲಿದೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟರು.

ಇದನ್ನೂ ಓದಿ