ಹೊಸದಿಗಂತ ವರದಿ ಹಾವೇರಿ:
ಶಾಲಾ ಆವರಣದ ವಿದ್ಯುತ್ ತಂತಿ ತುಂಡಾಗಿ ಬಿದ್ದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಮತ್ತಿಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಬಾವಿ ಗ್ರಾಮದ ಶಿವಯೋಗಿಶ್ವರ ಪ್ರೌಢ ಶಾಲೆಯಲ್ಲಿ ಈ ಅವಘಡ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಮಹಮ್ಮದ್ ಕಲಂದರ್ (10) ಎಂದು ಗುರುತಿಸಲಾಗಿದೆ.
ಶಾಲೆಯ ಆವರಣದಲ್ಲಿ ಮಧ್ಯಾಹ್ನದ ವೇಳೆ ಆಟ ಆಡುತ್ತಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮಹಮ್ಮದ್ ಕಲಂದರ್ ಸಾವನ್ನಪ್ಪಿದ್ದಾನೆ.
ಶ್ರೇಯಸ್ ಮತ್ತು ಚೇತನ ಗಾಯಗಳಿಂದ ತೊಂದರೆಗೊಳಗಾಗಿದ್ದು ಸದ್ಯ ಇಬ್ಬರೂ ವಿದ್ಯಾರ್ಥಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹಂಸಬಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ವರದಿಯಾಗಿದೆ.