ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸ್ಕೃತವನ್ನು ಪ್ರಾಥಮಿಕ ಹಂತದಲ್ಲೂ, ಮಾಧ್ಯಮಿಕ ಹಂತದಲ್ಲೂ ಆನ್‌ಲೈನ್ ಮೂಲಕ ಕಲಿಸುವ ಒಂದು ತಿಂಗಳ ಸುಮಾರು ೨೫ ತರಗತಿಗಳ ಪಾಠವನ್ನು ಮಂಗಳೂರು ಸಂಸ್ಕೃತ ಸಂಘದ ಪ್ರಮುಖರೂ , ಸಂಸ್ಕೃತ ಪ್ರೇಮಿಗಳೂ ಆಗಿರುವ ಡಾ.ಶಿಕಾರಿಪುರ ಕೃಷ್ಣಮೂರ್ತಿಯವರು ಆಯೋಜಿಸಿದ್ದಾರೆ.
ಜ.೧೬ ರಿಂದ ವಾರದ ಐದು ದಿನಗಳಲ್ಲಿ ಸಂಜೆ ೬ರಿಂದ ೭ರವರೆಗೆ ಪ್ರಾಥಮಿಕರಿಗೂ ಅನಂತರ ಒಂದು ಗಂಟೆ ಮಧ್ಯಮ ವರ್ಗದವರಿಗೂ ಕಲಿಸಲಾಗುತ್ತದೆ.
ನೋಂದಾಯಿಸಿದವರಿಗೆ ಲಿಂಕ್ ಕಳುಹಿಸಲಾಗುವುದು. ಎಲ್ಲ ವರ್ಗಗಳ ಮಕ್ಕಳೂ, ಹಿರಿಯರೂ ಸೇರಬಹುದಾಗಿದ್ದು, ನೋಂದಾಯಿಸಲು ಪದ್ಮಾ (೯೪೪೮೮೩೬೦೫೯ )ಅಥವಾ ಸುಧಾ (೯೪೪೯೩೬೬೮೮೬)ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಸಂಸ್ಕೃತದ ಸಾಮಾನ್ಯ ಜ್ಞಾನವಿದ್ದಲ್ಲಿ ಸ್ತೋತ್ರ -ಮಂತ್ರಗಳ ಭಾವ ತಿಳಿದು ಭಕ್ತಿ ಬೆಳೆಯುತ್ತದೆ.ನಮ್ಮ ವ್ಯಾವಹಾರಿಕ ಮಾತಿನಲ್ಲೂ ಸಂಸ್ಕೃತಿ-ಸೌಂದರ್ಯದ ಪರಿಷ್ಕಾರವಾಗುತ್ತದೆ ಎಂಬ ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರ ಅಭಿಪ್ರಾಯವನ್ನು ಇಲ್ಲಿ ಸ್ಮರಿಸಬಹುದು.


