October 6, 2026
Tuesday, October 6, 2026
spot_img

ನಕಲಿ ಆ್ಯಪ್‌ ನಂಬಿ ಮೋಸಹೋದ ಮಹಿಳೆ: ಲಕ್ಷಾಂತರ ರೂಪಾಯಿ ಪಂಗನಾಮ!

ಹೊಸದಿಗಂತ ವರದಿ ಮಂಗಳೂರು:

ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸುವ ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19.06 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಮಹಿಳೆಯು ಸಾಫ್ಟೋನಿಕ್‌ ವೆಬ್‌ಸೈಟ್‌ ಹುಡುಕಾಡಿ ಎಪಿಕೆ ಫೈಲ್‌ ಡೌನ್ಲೋಡ್‌ ಮಾಡಿದ್ದರು. ಬಳಿಕ ಸಾಫ್ಟೋನಿಕ್‌ ಆ್ಯಪ್‌ ಬಳಸಿ ಬ್ಯಾಂಕ್‌ ಖಾತೆಯ ವಿವರ ನೀಡಿದ್ದರು. ಹೆಚ್ಚಿನ ಲಾಭದ ಉದ್ದೇಶದಿಂದ ಈ ಆ್ಯಪ್‌ನಲ್ಲಿರುವ ನಾನಾ ಕಂಪೆನಿಗಳಿಗೆ ಒಟ್ಟು 19,06,166 ಲಕ್ಷ ರು. ಹೂಡಿಕೆ ಮಾಡಿದ್ದರು. ಕೊನೆಗೆ ಮೋಸ ಹೋಗಿರುವ ಅರಿವಾಗಿ ಉರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Must Read