ರಾಜ್ಯದ ಶೇ.10.68ರಷ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸಂಪರ್ಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದ ಕೇವಲ ಶೇ.10. 68 ರಷ್ಟು ಸರ್ಕಾರಿ ಶಾಲೆಗಳು ಹಾಗೂ ಶೇ. 71. 98ರಷ್ಟು ಖಾಸಗಿ ಶಾಲೆಗಳು ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ.

ಕೇರಳದಲ್ಲಿ ಶೇ.94.57ರಷ್ಟು ಸರ್ಕಾರಿ ಶಾಲೆಗಳಲ್ಲಿ ಈ ಸೌಲಭ್ಯವಿದೆ. ಗುಜರಾತ್‌ನಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಸರ್ಕಾರಿ ಶಾಲೆಗಳ ಪ್ರಮಾಣ ಶೇ. 94.18 ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯ’ ಕುರಿತು ಸಂಸದರಾದ ಫುಲೋ ದೇವಿ ನೇತಮ್ ಮತ್ತು ರಂಜೀತ್ ರಂಜನ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರದಿಂದ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಕರ್ನಾಟಕದಲ್ಲಿ 49,679 ಸರ್ಕಾರಿ ಶಾಲೆಗಳಿವೆ. ಈ ಪೈಕಿ 5,308 ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯವಿದೆ. ರಾಜ್ಯದ 19,650 ಖಾಸಗಿ ಶಾಲೆಗಳ ಪೈಕಿ 14,145 ಶಾಲೆಗಳು ಅಂತರ್ಜಾಲದ ಸೌಲಭ್ಯ ಹೊಂದಿವೆ. ನವದೆಹಲಿ (2,762 ಸರ್ಕಾರಿ ಶಾಲೆಗಳು), ಚಂಡೀಗಢ (123) ಮತ್ತು ಪುದುಚೇರಿ (422) ಸರ್ಕಾರಿ ಶಾಲೆಗಳಲ್ಲಿ ಶೇ. 100 ರಷ್ಟು ಇಂಟರ್ ನೆಟ್ ಸೌಲಭ್ಯವಿದೆ.

ಕೇರಳ (5,010) ಮತ್ತು ಗುಜರಾತ್ (34,699) ಸರ್ಕಾರಿ ಶಾಲೆಗಳಲ್ಲಿ ಕ್ರಮವಾಗಿ ಶೇ. 94. 57 ಮತ್ತು 94. 18 ರಷ್ಟು ಇಂಟರ್ನೆಟ್ ಸೌಲಭ್ಯವಿದೆ. ಇನ್ನೂ ಬಿಹಾರದಲ್ಲಿ (75, 558) ಅಂದರೆ ಶೇ. 5. 85 ರಷ್ಟು ಶಾಲೆಗಳು ಮಾತ್ರ ಅಂತರ್ಜಾಲದ ಸೌಲಭ್ಯ ಹೊಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!