ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಐತಿಹಾಸಿಕ ಗೆಲುವಿಗೆ ಕೇವಲ ಕೆಲ ಹಂತಗಳು ಮಾತ್ರ ಬಾಕಿಯಿವೆ. ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪಡೆ, ಮೂರನೇ ದಿನದ ಅಂತ್ಯಕ್ಕೆ 213 ರನ್‌ಗಳನ್ನು ಗಳಿಸಿದೆ. ದಕ್ಷಿಣ ಆಫ್ರಿಕಾ ತಂಡ 27 ವರ್ಷಗಳ ಐಸಿಸಿ ಟ್ರೋಫಿಯ ಬರ ನೀಗಿಸಿಕೊಳ್ಳು 180 ಓವರ್ಗಳಲ್ಲಿ ಕೇವಲ 69 ರನ್ಗಳಿಸಿಬೇಕಿದೆ.
ಆರಂಭದಲ್ಲೇ ರಯಾನ್ ರಿಕಲ್ಟನ್ (6) ಶೀಘ್ರ ವಿಕೆಟ್ ಒಪ್ಪಿಸಿದರೂ, ಮಧ್ಯದ ಹಂತದಲ್ಲಿ ಐಡೆನ್ ಮಾರ್ಕ್ರಮ್ ಹಾಗೂ ಟೆಂಬ ಬವುಮಾ ಆಫ್ರಿಕನ್ನರ ಬಹುದಿನಗಳ ಕನಸನ್ನ ಲಾರ್ಡ್ಸ್ ಮೈದಾನದಲ್ಲಿ ಶನಿವಾರ ನೆರವೇರಿಸಲಿದ್ದಾರೆ. ಮಾರ್ಕ್ರಮ್ 102 ರನ್‌ಗಳ ಅಜೇಯ ಶತಕ ಹಾಗೂ ಬವುಮಾ 65 ರನ್‌ಗಳ ತಾಳ್ಮೆಯ ಆಟ ಮೂಲಕ ಗೆಲುವಿನ ಭರವಸೆಯನ್ನ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ 207 ರನ್‌ಗಳಿಗೆ ಮುಕ್ತಾಯವಾಗಿದ್ದು, ಕಗಿಸೋ ರಬಾಡ 4 ಹಾಗೂ ಲುಂಗಿ ಎನ್‌ಗಿಡಿ 3 ವಿಕೆಟ್ ಎಗರಿಸಿ ರಬಾಡಗೆ ಸಾಥ್ ನೀಡಿದರು. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್ ಗಳಿಸಿತ್ತು, ಆದರೆ ದಕ್ಷಿಣ ಆಫ್ರಿಕನ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 138 ರನ್‌ಗಳಿಗೆ ಆಲೌಟ್ ಆಗಿತ್ತು.
ಈ ಪಂದ್ಯವನ್ನು ಗೆದ್ದು ಕೊಳ್ಳುವುದರಿಂದ, ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಐಸಿಸಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಪಡೆಯಲಿದೆ. 1998ರಲ್ಲಿ ಶಾರ್ಜಾ ಕಪ್ ನಂತರ ದಕ್ಷಿಣ ಆಫ್ರಿಕಾ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಲಾರ್ಡ್ಸ್ ಮೈದಾನದಲ್ಲಿ ಈ ಕನಸು ನಿಜವಾಗುವ ಎಲ್ಲಾ ಲಕ್ಷಣಗಳಿವೆ.