ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಚ್ಚರು ಮಾತ್ರ ಅನಾವಶ್ಯಕವಾಗಿ ಕಾಮೆಂಟ್ ಮಾಡ್ತಾರೆ. ಸ್ಟಾರ್ಗಳು ಸಹ ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಅನ್ನಿಸುತ್ತದೆ ಎಂದು ನಟಿ ಅದಿತಿ ಪ್ರಭುದೇವ ಉತ್ತರಿಸಿದ್ದಾರೆ.
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರೀ ಸಿನಿಮಾ ತಾರೆಯರಿಗೆ ಹೀರೋಯಿನ್ಸ್ ಅಂತಲ್ಲ. ಸೋಶಿಯಲ್ ಮೀಡಿಯಾ ಅಂದ ಮೇಲೆ ಇದೆಲ್ಲ ಇರುತ್ತದೆ. ನಾನು ವೈಯಕ್ತಿಕವಾಗಿ ಬ್ಯಾಡ್ ಕಾಮೆಂಟ್ಸ್ ಅನುಭವಿಸಿಲ್ಲ. ಹುಡುಗರು ಬಿಟ್ಟಾಕಿ, ಹುಡುಗಿಯರೂ ಕೂಡ ಕಾಮೆಂಟ್ ಮಾಡೋದು ಇದೆ ಎಂದಿದ್ದಾರೆ. ಇವರಿಗೆಲ್ಲ ಫೇಕ್ ಅಕೌಂಟ್ ಮಾಡಿ ಈ ರೀತಿ ಕೆಟ್ಟ ಕಾಮೆಂಟ್ ಮಾಡೋದ್ರಿಂದ ಏನು ಸಿಗುತ್ತೋ ಗೊತ್ತಿಲ್ಲ. ಇದನ್ನೆಲ್ಲ ಇಗ್ನೋರ್ ಮಾಡೋದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.