ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಗುರಿ ತಲುಪಲು ಇನ್ನು ಕೇವಲ ಮೀಟರ್ ಬಾಕಿ… ಅವರು ಬಂದ ಕೂಡಲೇ ಆರೋಗ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ… ಈ ಮಾತು ಕೇಳಿ ಬಂದದ್ದು ಉತ್ತರಕಾಶಿಯಯ ಅಧಿಕಾರಿಗಳು.
ಹನ್ನೊಂದು ದಿನಗಳಿಂದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ನೋವು, ಸಂಕಟಗಳಿಂದ ಪರಿತಪಿಸುತ್ತಿರುವ 41 ಮಂದಿ ಕಾರ್ಮಿಕರಿಗೆ ಹೊಸ ಜೀವನದ ಆಸೆ ಚಿಗರೊಡೆದಿದೆ.
ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದ್ದು, ನಿತ್ರಾಣ ಸ್ಥಿತಿಯಲ್ಲಿರುವ ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ 20 ಆಂಬ್ಯುಲೆನ್ಸ್ಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.
ಕಾರ್ಮಿಕರು ಜೀವಂತವಾಗಿದ್ದು, ಅವಶೇಷಗಳಿಂದ ಮುಚ್ಚಿ ಹೋಗಿರುವ ಸುರಂಗವನ್ನು ತೆರವುಗೊಳಿಸಿ, ಕಾರ್ಮಿಕರನ್ನು ಕಾಪಾಡಲು ಇನ್ನೂ 12 ಮೀಟರ್ಗಳಷ್ಟೇ ಬಾಕಿ ಇದೆ. ರಕ್ಷಣಾ ಕಾರ್ಯ ಮುಗಿಯುತ್ತಿದಂತೆ ಕಾರ್ಮಿಕರನ್ನು ಹೊರಗೆ ಕರೆತರು ಬೆಡ್ಗಳನ್ನು ರೆಡಿ ಮಾಡಿಕೊಂಡಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಘಟನಾ ಸ್ಥಳವನ್ನು ತಲುಪಲಿದ್ದಾರೆ.
ಸದ್ಯ ರಕ್ಷಣಾ ಕಾರ್ಯಾಚರಣೆ ಮಹತ್ವದ ಹಂತಕ್ಕೆ ತಲುಪಿದೆ. ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರಲ್ಲಿ ಜಾರ್ಖಂಡ್ ರಾಜ್ಯಕ್ಕೆ ಸೇರಿದ 15 ಕಾರ್ಮಿಕರು ವೈದ್ಯಕೀಯವಾಗಿ ಫಿಟ್ ಆಗಿದ್ದಾರೆ ಎಂದು ಸರ್ಕಾರ ಘೋಷಿಸಿದ್ದು, ಅವರನ್ನು ವಿಮಾನದಲ್ಲಿ ತವರಿಗೆ ಕರೆತರಲು ಸಕಲ ತಯಾರಿ ಮಾಡಿಕೊಂಡಿದೆ. ಕಾರ್ಮಿಕರನ್ನು ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ನಿಂದ ರಾಂಚಿಗೆ ಏರ್ಲಿಫ್ಟ್ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ಪ್ರಧಾನಿ ಕಾರ್ಯಾಲಯದ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಅವರು ರಕ್ಷಣಾ ಕಾರ್ಯಾಚರಣೆಯ ಮಾಹಿತಿಯನ್ನು ನೀಡಿದ್ದು, ನಾವು ಇನ್ನೂ 6 ಮೀಟರ್‌ಗಳಷ್ಟು ಮುಂದೆ ಸಾಗಲು ಸಾಧ್ಯವಾಯಿತು ಎಂದು ಘೋಷಿಸಲು ನಮಗೆ ಸಂತೋಷವಾಗುತ್ತಿದೆ ಮತ್ತು ಮುಂದಿನ 2 ಗಂಟೆಗಳಲ್ಲಿ ನಾವು ಮುಂದಿನ ಹಂತಕ್ಕೆ ತಯಾರಿ ನಡೆಸುತ್ತಿದ್ದೇವೆ ಎಂದರು.