ಅಸ್ಥಿಪಂಜರ ಮಾತ್ರ ಉಳಿದಿದೆ, ಯಾವಾಗ ಸುಟ್ಟುಹೋಗುತ್ತೋ ಗೊತ್ತಿಲ್ಲ: ಹಿಂಗ್ಯಾಕಂದ್ರು ವಿ ಸೋಮಣ್ಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು ರಾಜ್ಯದ ಸಿದ್ದರಾಮಯ್ಯ ಸರ್ಕಾರವನ್ನು ಗೇಲಿ ಮಾಡಿದರು.

ಯಾವ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಸೋಮಣ್ಣ, ಈ ಸರ್ಕಾರಕ್ಕೆ ಕಿವಿ, ಕಣ್ಣು, ಮೂಗು ಇಲ್ಲ, ಅಸ್ಥಿಪಂಜರ ಮಾತ್ರ ಉಳಿದಿದೆ. ಅದು ಸಹ ಯಾವಾಗ ಸುಟ್ಟುಹೋಗುತ್ತೋ ಗೊತ್ತಿಲ್ಲ ಎಂದರು.

ಯಾವ ಜನರನ್ನು ಗಮನದಲ್ಲಿಟ್ಟಿಕೊಂಡು ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ? ಅಸಲಿಗೆ ರಾಜ್ಯದಲ್ಲಿ ಸರ್ಕಾರವೇ ಅಧಿಕಾರದಲ್ಲಿಲ್ಲ ಎಂದು ಸಚಿವ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!