October 11, 2026
Sunday, October 11, 2026
spot_img

ನಮ್ಮ ರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಯ ಲಾಭ ಪಡೆಯುವ ಹಕ್ಕಿದೆ: ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳು ನಮ್ಮ ರಾಜ್ಯದ ಜನರಿಗೆ ಮಾತ್ರ ತಲುಪಬೇಕು. ಗ್ಯಾರಂಟಿ ಯೋಜನೆ ಇರೋದು ನಮ್ಮ ಕರ್ನಾಟಕದ ಜನರಿಗೆ ಮಾತ್ರ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಫಲಾನುಭವಿಗಳು ಗುರುತಿನ ಚೀಟಿಯನ್ನು ನೀಡಲೇಬೇಕು. ವಿಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಿದ್ದೇವೆ ಎಂದು ಹೇಳುತ್ತಿವೆ. ಆದರೆ ಜನರಿಗೆ ಒಳ್ಳೆಯದಾಗಲಿ ಎಂದು ಕೊಟ್ಟ ಯೋಜನೆಗಳನ್ನು ನಾವ್ಯಾಕೆ ವಾಪಸ್‌ ಪಡೆಯೋಣ? ನಮ್ಮ ರಾಜ್ಯದ ಜನ ಉಚಿತ ವಿದ್ಯುತ್‌ ಬಳಸಲಿ. ಆದರೆ ಬೇರೆ ರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವವರಿಗೆ ಯಾಕೆ ಕೊಡಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ.

ಈ ಗ್ಯಾರಂಟಿ ಯೋಜನೆಗಳನ್ನು ನಮ್ಮ ಮನಸ್ಸಿನಿಂದ ನೀಡಿದ್ದೇವೆ. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಗ್ಯಾರಂಟಿಗಳು ಇವೆ. ಅವರ ಮನೆ ಬೆಳಗಬೇಕು, ಆರ್ಥಿಕ ಶಕ್ತಿ ಸಿಗಬೇಕು. ಇದನ್ನು ಅರ್ಥ ಮಾಡಿಕೊಂಡಿದ್ದರೆ ವಿಪಕ್ಷಗಳು ಹೀಗೆ ಮಾತನಾಡುತ್ತಾ ಇರಲಿಲ್ಲ ಎಂದಿದ್ದಾರೆ.

Must Read