ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಯುದ್ಧಕ್ಕೆ ಇನ್ವೈಟ್ ಕೊಟ್ಟಿರೋ ಪಾಕಿಸ್ತಾನಕ್ಕೆ ತಾನು ಮಾಡಿದ್ದು ತಪ್ಪು ಎಂದು ಗೊತ್ತಾಗಿದೆ. ಜಟ್ಟಿ ಮಣ್ಣಿಗೆ ಬಿದ್ದರೂ ಮೀಸೆ ಮಣ್ಣಾಗೋದಿಲ್ಲ ಅನ್ನೋ ಹಾಗೆ ಓಡಾಡ್ತಿರೋ ಪಾಕಿಸ್ತಾನಕ್ಕೆ ಒಂದಾದಮೇಲೊಂದು ಕಷ್ಟ ಎದುರಾಗ್ತಿದೆ.
ಮೂಲಗಳ ಪ್ರಕಾರ ಪಾಕಿಸ್ತಾನ ತನ್ನ ಜನರ ಮೇಲೂ ಕೆಲವು ನಿರ್ಬಂಧ ವಿಧಿಸಿದ್ದು, ಯುದ್ಧಕ್ಕಾಗಿ ಹಣ ಒಟ್ಟುಗೂಡಿಸಲು ಎಟಿಎಂಗಳಲ್ಲಿ ವಿತ್‌ಡ್ರಾ ಮಿತಿ ಹೇರಿದೆ. ಜನರು ಎಟಿಎಂಗಳಿಂದ ಮೂರು ಸಾವಿರ ರೂಪಾಯಿ ಮಾತ್ರವೇ ವಿತ್‌ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾಗಿ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಪಾಕಿಸ್ತಾನವು 50 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಭಾರತದ ಭೂಪ್ರದೇಶದ ಮೇಲೆ ಹಾರಿಸಿತು. ಆದರೆ, ಇವೆಲ್ಲವನ್ನೂ ಪ್ರತಿಯೊಂದನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳಾದ S-400 ಮತ್ತು ಆಕಾಶ್ ತೀರ್ ವ್ಯವಸ್ಥೆಯಿಂದ ಹೊಡೆದುರುಳಿಸಲಾಗಿದೆ. ಪಾಕಿಸ್ತಾನಿ ಸೇನೆಯು ಎಲ್‌ಒಸಿ ಉದ್ದಕ್ಕೂ ಕದನ ವಿರಾಮವನ್ನು ಉಲ್ಲಂಘಿಸಿ ನಾಗರಿಕ ಪ್ರದೇಶಗಳಲ್ಲಿ ಶೆಲ್ ದಾಳಿ ನಡೆಸಿ, ಕಟ್ಟಡಗಳು ಮತ್ತು ಜಾನುವಾರುಗಳಿಗೆ ಹಾನಿಯನ್ನುಂಟುಮಾಡಿತು. ಭಾರತೀಯ ಸೇನೆಯು ಸಮಾನ ಬಲದಿಂದ ಪ್ರತಿಕ್ರಿಯಿಸಿತು.