ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಯಾಮಿ ಗೌತಮ್, ಪ್ರಿಯಾಮಣಿ ಮತ್ತಿತರರು ಮುಖ್ಯಭೂಮಿಕೆಯಲ್ಲಿ ಕಾಣಿಸಿರುವ ಆರ್ಟಿಕಲ್ 370 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಮಾಯಿ ಮಾಡುತ್ತಿದೆ.
ಈ ಸಿನಿಮಾವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೀಕ್ಷಣೆ ಮಾಡಿದ್ದು, ಒಂದೊಳ್ಳೆ ಸಿನಿಮಾ ಎಂದು ಹೇಳಿದ್ದಾರೆ. ಸಚಿವರ ಮಾತಿನಿಂದ ಸಿನಿಮಾಕ್ಕೆ ಹೊಸ ಬಲ ಸಿಕ್ಕಿದೆ.
ನಾನು ನನ್ನ ಕುಟುಂಬದ ಜೊತೆ ಥಿಯೇಟರ್‌ಗೆ ಹೋಗಿ ಆರ್ಟಿಕಲ್ 370ಸಿನಿಮಾ ವೀಕ್ಷಿಸಿದೆ. ಈಗಾಗಲೇ ಅನೇಕರು ಸಿನಿಮಾ ನೋಡುವಂತೆ ಹೇಳಿದ್ದರು. ನಿಜಕ್ಕೂ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕುವ ಘಟನೆಯನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೂ ಇದು ಉತ್ತಮ ಉದಾಹರಣೆ ಎಂದಿದ್ದಾರೆ.