ಜಗತ್ತಿಗೆ ಶಾಕ್‌ ನೀಡಿದ ಒಪೆಕ್‌ ರಾಷ್ಟ್ರಗಳು: ತೈಲೋತ್ಪಾದನಾ ಮಿತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಗತ್ತಿನ ತೈಲೋತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಸೌದಿ ಅರೇಬಿಯಾವನ್ನೊಳಗೊಂಡ ಒಪೆಕ್‌ ರಾಷ್ಟ್ರಗಳು ದಿಢೀರ್ ಆಗಿ ತೈಲೋತ್ಪಾದನೆಯ ಕಡಿತವನ್ನು ಘೋಷಿಸಿವೆ. ಇದರ ಪರಿಣಾಮ ಕಚ್ಚಾತೈಲ ದರವು ಏರಿಕೆಯಾಗುವ ನಿರೀಕ್ಷೆಯಿದೆ. ತೈಲ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಒಪೆಕ್‌ ರಾಷ್ಟ್ರಗಳು ಹೇಳಿವೆ.

ಒಪೆಕ್‌ ದೇಶಗಳು ಮೇ 2023ರಿಂದ ಡಿಸೆಂಬರ್‌ 2023ರ ವರೆಗೂ ಈ ಕಡಿತಗಳನ್ನು ನಡೆಸುವುದಾಗಿ ಹೇಳಿವೆ. ಇದರೊಟ್ಟಿಗೆ ರಷ್ಯಾದ ಉಪ ಪ್ರಧಾನಿ ಕೂಡ ತೈಲ ಉತ್ಪಾದನೆಯನ್ನು ದಿನಕ್ಕೆ 500,000 ಬ್ಯಾರೆಲ್‌ ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದು 2023ರ ಅಂತ್ಯದವರೆಗೂ ಇದು ಅನ್ವಯಿಸುತ್ತದೆ ಎಂದಿದ್ದಾರೆ.

ಈ ಘೋಷಣೆಯಿಂದಾಗಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಈಗಾಗಲೇ ಪ್ರತಿ ಬ್ಯಾರೆಲ್ 5 ಡಾಲರ್‌ ಏರಿಕೆಯಾಗಿದ್ದು ಮುಂದಿನ 10 ಡಾಲರ್‌ ವರೆಗೂ ಏರಬಹುದು ಎಂದು ನಿರೀಕ್ಷಿಸಲಾಗಿದೆ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸ್ಥಿರವಾಗಿಸಲು ಈ ಕ್ರಮ ಅಗತ್ಯ ಎಂದು ಸೌದಿ ಅರೆಬಿಯಾ ಹೇಳಿದೆ.

ಒಪೆಕ್‌ ದೇಶಗಳ ಈ ಉತ್ಪಾದನೆ ಕಡಿತದಿಂದ ಒಟ್ಟಾರೆಯಾಗಿ 3.66ಮಿಲಿಯನ್ ಬ್ಯಾರೆಲ್‌ ತೈಲ ಕಡಿತವಾಗಲಿದ್ದು ಜಾಗತಿಕ ಬೇಡಿಕೆಯ 3.7 ಶೇಕಡಾದಷ್ಟು ತೈಲ ಮಾರುಕಟ್ಟೆಯಿಂದ ಕಡಿತಗೊಳ್ಳಲಿದೆ ಎಂದು ಸುದ್ದಿಸಂಸ್ಥೆ ರಾಯೀಟರ್ಸ್‌ ಅಂದಾಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!