ಆಪರೇಷನ್ ಸಿಂಧೂರ್ ಯಶಸ್ವಿ: ಪ್ರಧಾನಿ ಮೋದಿಗೆ ಎನ್​ಡಿಎ ಸಂಸದರಿಂದ ಗೌರವ ಸನ್ಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್ ಯಶಸ್ಸಿನ ಬಳಿಕ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸನ್ಮಾನಿಸಿದರು.

ಎಲ್ಲೆಲ್ಲೂ ಹರ ಹರ ಮಹಾದೇವ ಘೋಷಣೆ ಮೊಳಗಿತು. ಸಭೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯಶಸ್ವಿ ಮಿಲಿಟರಿ ದಾಳಿಗಾಗಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಎನ್‌ಡಿಎ ಸಂಸದರು ಶ್ಲಾಘಿಷಿದರು.

ಆಗಸ್ಟ್ 7 ರಂದು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವ ಎರಡು ದಿನಗಳ ಮೊದಲು ಈ ನಿರ್ಣಾಯಕ ಸಭೆ ನಡೆದಿದೆ. ಆಗಸ್ಟ್ 21 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದೊಳಗೆ, ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕಾಗುತ್ತದೆ. ಮೈತ್ರಿಕೂಟದ ಬಹುಮತದಿಂದಾಗಿ ಅವರ ಆಯ್ಕೆ ಖಚಿತವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!