ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ವಿರುದ್ಧದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಬೆನ್ನಲ್ಲೇ ದೇಶದ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯವಾಗಿದೆ.
ಶ್ರೀನಗರ ವಿಮಾನ ನಿಲ್ದಾಣ ಸ್ತಬ್ಧವಾಗಿದ್ದು, ಇಂದು ಯಾವುದೇ ಪ್ರಯಾಣಿಕ ವಿಮಾನಗಳು ಹಾರಾಟ ನಡೆಸಿಲ್ಲ. ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ. ಇಂಡಿಗೊ ಏರ್‌ಲೈನ್ಸ್ ಪ್ರಕಟಣೆ ಹೊರಡಿಸಿದ್ದು, ವಿಮಾನ ನಿಲ್ದಾಣ ತಲುಪುವ ಮೊದಲು ಪ್ರಯಾಣಿಕರು ಇಂಡಿಗೊದ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ನೋಡಿಕೊಂಡು ಬರುವಂತೆ ಮನವಿ ಮಾಡಿದೆ.
ಇನ್ನು ಬಿಕಾನೆರ್‌ಗೆ ತೆರಳಿದ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ವೈಮಾನಿಕ ನಿರ್ಬಂಧಗಳಿದ್ದು, ಈ ಬಗ್ಗೆ ಮಾಹಿತಿ ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಹೇಳಿದೆ.