ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಬಳಿಕ ದೇಶವಾಸಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಾ, ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ಕೋಟ್ಯಂತರ ಭಾರತೀಯರ ಭಾವನಾತ್ಮಕ ಸಂಬಂಧವಾಗಿದೆ ಎಂದು ಹೇಳಿದರು.
ಆಪರೇಷನ್ ಸಿಂದೂರ್ ಯಶಸ್ವಿಯನ್ನು ದೇಶದ ಪ್ರತಿ ತಾಯಿ, ಸಹೋದರಿಯರಿಗೂ ಸಮರ್ಪಣೆ ಮಾಡುತ್ತೇನೆ. ಆಪರೇಷನ್ ಸಿಂದೂರ್ ಕೇವಲ ಹೆಸರವಲ್ಲ. ಇದೊಂದು ದೇಶದ ಪ್ರತಿಯೊಬ್ಬರ ಭಾವನಾತ್ಮಕ ಸಂಬಂಧವಾಗಿದೆ. ನ್ಯಾಯದ ಪ್ರತಿಜ್ಞೆ ಎಂಬುದಾಗಿ ಪ್ರಧಾನಿಮೋದಿ ಹೇಳಿದರು.