ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಗುಂಡಿನ ದಾಳಿಗಳಿಗೆ ಫಿರಂಗಿ ಗುಂಡುಗಳ ಮೂಲಕವೇ ನಾವು ಉತ್ತರಿಸುತ್ತೇವೆ ಎಂಬುದಕ್ಕೆ ಆಪರೇಷನ್ ಸಿಂದೂರ ಸಾಕ್ಷಿಯಾಗಿದೆ. ಇದು ರಾಷ್ಟ್ರದ ಶಕ್ತಿಯ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಭೋಪಾಲ್‌ನಲ್ಲಿ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತಿಕರಣ ಮಹಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಆಪರೇಷನ್ ಸಿಂದೂರ ಭಯೋತ್ಪಾದನೆಯ ವಿರುದ್ಧದ ಅತಿದೊಡ್ಡ ದಾಳಿಯಾಗಿದೆ. ಪಾಕಿಸ್ತಾನದ ಗುಂಡಿನ ದಾಳಿಗಳಿಗೆ ಫಿರಂಗಿ ಗುಂಡುಗಳ ಮೂಲಕವೇ ಉತ್ತರಿಸುತ್ತೇವೆ ಎಂಬುದಕ್ಕೆ ಸ್ಪಷ್ಟ ನಿರ್ದಶನ ಆಗಿದೆ.” ಎಂದರು.
ನೀವು ಗುಂಡು ಹಾರಿಸಿದ್ರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಿ ಎಂದು ಪಾಕ್ ಮತ್ತು ಪಾಕ್ ಪ್ರಾಯೋಜಿತ ಭಯೋತ್ಪಾದಕರಿಗೆ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.