IPL ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂದೂರ’ ವಿಜಯೋತ್ಸವ.. ರೋಮಾಂಚಕ ಏರ್‌ಶೋ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಯಶಸ್ವಿಯಾಗಿ ನೆರವೇರಿದೆ. ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ನಡುವಿನ ಫೈನಲ್‌ ಪಂದ್ಯ ಮುಕ್ತಾಯದೊಂದಿಗೆ ಈ ಆವೃತ್ತಿಗೆ ತೆರೆ ಬೀಳಲಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಯಿತು.

ಇಂದಿನ ಫೈನಲ್‌ ಪಂದ್ಯವನ್ನು ಭಾರತೀಯ ಸೇನೆಗೆ ಅರ್ಪಿಸಲು ಬಿಸಿಸಿಐ ನಿರ್ಧಾರ ಕೈಗೊಂಡಿತ್ತು. ಅದಕ್ಕಾಗಿ ಪಂದ್ಯ ಆರಂಭಕ್ಕೂ ಮುನ್ನ ಮೂರು ಸೇನೆಗಳಿಗೆ ಗೌರವ ಸಲ್ಲಿಸಲಾಯಿತು.

45 ನಿಮಿಷಗಳ ಈ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ದೇಶಭಕ್ತಿ ಗೀತೆಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮೈ ನವಿರೇಳುವಂತೆ ಮಾಡಿದವು.

ಇದೇ ವೇಳೆ ವಾಯುಪಡೆಯಿಂದ ಏರ್‌ ಶೋ ಕೂಡ ನಡೆಯಿತು. ದೇಶದ ಅತಿದೊಡ್ಡ ಕ್ರೀಡಾಂಗಣದ ಮೇಲೆ ವಾಯುಪಡೆಯ ವಿಮಾನಗಳ ಸಾಹಸ ದೃಶ್ಯಗಳು ರೋಮಾಂಚನಗೊಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!