ಆಪರೇಷನ್‌ ಸಿಂದೂರ ಸಕ್ಸಸ್‌: ಬಾಗಲಕೋಟೆಯಲ್ಲಿ ಬೃಹತ್ ತಿರಂಗಾ ಯಾತ್ರೆ

ಹೊಸದಿಗಂತ ವರದಿ ಬಾಗಲಕೋಟೆ:

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸಿ ದೇಶದ ಯೋಧರಿಗೆ ನೈತಿಕ ಸ್ಥೈರ್ಯ ತುಂಬುವ ಮೂಲಕ ಬೆಂಬಲ ಸೂಚಿಸಲಾಯಿತು.

ಬಾಗಲಕೋಟೆ ನಗರಾದ್ಯಂತ ಸಾಗಿದ ಬೃಹತ್ ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರು, ವಕೀಲರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು , ಅಂಗಡಿ ವ್ಯಾಪಾರಸ್ಥರು ಹಾಗೂ ಸಹಸ್ರಾರು ಕಾರ್ಯಕರ್ತರುಗಳ ನೇತೃತ್ವದಲ್ಲಿ ವಂದೇ ಮಾತರಂ ಜಯಘೋಷ ಮೊಳಗಿತು.

ಈ ಸಂದರ್ಭದಲ್ಲಿ ಚರಂತಿಮಠದ ಪರಮ ಪೂಜ್ಯ ಪ್ರಭು ಸ್ವಾಮಿಗಳು, ಗುಳೇದಗುಡ್ಡ ಪಟ್ಟಣದ ಒಪ್ಪತ್ತೇಶ್ವರ ಶ್ರೀಗಳು , ಮಾತೆ ಮಾಣಿಕ್ಯೇಶ್ವರಿ ಅಮ್ಮನವರು ಅಮೀನಗಡ , ವೀರ ಯೋಧರು, ನಿವೃತ್ತ ಯೋಧರು, ಲೋಕಸಭಾ ಸದಸ್ಯರಾದ ಪಿ. ಸಿ. ಗದ್ದಿಗೌಡರ, , ರಾಜ್ಯಸಭಾ ಸದಸ್ಯ ರಾಯಣಸಾ ಬಾಂಡಗೆ, ಬೌಧ್ದಿಕ ಪ್ರಮುಖರಾದ ನಂದು ಗಾಯಕವಾಡ, ಬಸವರಾಜ ಹುನಗುಂದ, ಸುರೇಶ ಕೊಣ್ಣೂರ ಸೇರಿದಂತೆ ಪಕ್ಷದ ಪ್ರಮುಖರು, ಸಾರ್ವಜನಿಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ದೇಶಭಕ್ತರು ದೇಶಾಭಿಮಾನಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!