ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಸುಶು ಪಿಲ್ಮ ಪ್ಯಾಕ್ಟರಿ ವತಿಯಿಂದ ಉತ್ತರ ಕರ್ನಾಟಕ ಭಾಗದ ಕಲಾವಿರದ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎರಡು ತಿಂಗಳ ಕಿರು ತರಬೇತಿ ಕಾರ್ಯಾಗಾರ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಓಂ ಕಿರಣ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಅನುಭವಿ ಕಲಾವಿದರು, ಅಭಿನಯ, ನಿರ್ದೇಶನ, ಸಂಕಲನ ಹಾಗೂ ನಿರೂಪಣೆ ಕುರಿತು ತರಬೇತಿ ನೀಡಲಾಗುವುದು. ಶಾರ್ಟ್ ಫಿಲ್ಮ್ ಸಹ ಅವರಿಂದ ತಯಾರಿಸಲಾಗುವುದು. ಸಾಹಿತಿಗಳು, ನಿರ್ಮಾಪಕರು ಹಾಗೂ ವಿತರಕರು ಒಗ್ಗೂಡಿ ಈ ಕಾರ್ಯಾಗಾರ ಆಯೋಜಿಸಿದ್ದಾರೆ ಎಂದರು.
ರಂಗತಜ್ಞೆ ವಿಶ್ವೇಶ್ವರಿ ಹಿರೇಮಠ, ಪ್ರತಿ ಶನಿವಾರ ಹಾಗೂ ಭಾನುವಾರ ತರಬೇತಿ ನೀಡಲಾಗುವುದು. ವಿದ್ಯಾನಗರದ ಬಿಬಾ ಷೋ ರೂಂ ಮೇಲ್ಮಹಡಿಯಲ್ಲಿ ಮುಂದಿನ ಭಾನುವಾರದಿಂದ(ಆ. 20) ತರಗತಿ ಆರಂಭವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ತರಗತಿ ನಡೆಯಲಿದ್ದು, ಈಗಾಗಲೇ 20ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ನಿರ್ದೇಶಕ ಕುಮಾರ ಬೇಂದ್ರೆ, ತರಬೇತುದಾರ ಸುರೇಶ ವಿ., ಕಲಾ ನಿರ್ದೇಶಕ ಕಾರ್ತಿಕ ಸಿಂಧೆ ಇದ್ದರು.