ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಂಗನಾ ರನೌತ್ ನಿರ್ದೇಶಿಸಿ, ನಿರ್ಮಾಣವೂ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಆದರೆ ಕಂಗನಾರ ಸಿನಿಮಾ ಬಿಡುಗಡೆಗೆ ಪಂಜಾಬ್ನಲ್ಲಿ ಹಾಗೂ ಇನ್ನೂ ಕೆಲವು ಕಡೆ ವಿರೋಧ ವ್ಯಕ್ತವಾಗಿದೆ.
ಪಂಜಾಬ್ನಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಅವಕಾಶವನ್ನೇ ನೀಡಲಾಗಿಲ್ಲ. ಇದೀಗ ಈ ವಿಷಯವಾಗಿ ನಟಿ ಕಂಗನಾ ರನೌತ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
‘ನನ್ನ ಸಿನಿಮಾಕ್ಕೆ ಎಲ್ಲರೂ ಪ್ರೀತಿ ವ್ಯಕ್ತಪಡಿಸುತ್ತಿರುವುದರಿಂದ ನನ್ನ ಹೃದಯ ತುಂಬಿ ಬಂದಿದೆ. ಆದರೆ ನನ್ನ ಹೃದಯದಲ್ಲಿ ಇನ್ನೂ ನೋವಿದೆ. ಒಂದು ಸಮಯವಿತ್ತು, ನನ್ನ ಸಿನಿಮಾಗಳು ಪಂಜಾಬ್ನಲ್ಲಿ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು. ಆದರೆ ಈಗ ಪಂಜಾಬ್ನಲ್ಲಿ ನನ್ನ ಸಿನಿಮಾ (ಎಮರ್ಜೆನ್ಸಿ) ಬಿಡುಗಡೆಯನ್ನೇ ಮಾಡಲಾಗುತ್ತಿಲ್ಲ. ಕೆನಡಾ, ಬ್ರಿಟನ್ ಮತ್ತು ಇತರೆ ಕೆಲವು ಕಡೆ ನನ್ನ ಸಿನಿಮಾದ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಸಿನಿಮಾ ತಂಡದ ಮೇಲೆ ದಾಳಿಗಳನ್ನು ಮಾಡಲಾಗಿದೆ ಎಂದಿದ್ದಾರೆ.
ಕೆಲವು ಸಣ್ಣ ಜನರು, ಬೆರಳೆಣಿಕೆಯಷ್ಟು ಜನರು ಈ ಬೆಂಕಿಯನ್ನು ಹಾಕಿದ್ದಾರೆ. ಈ ಬೆಂಕಿಯಲ್ಲಿ ನಾವು ನೀವು ಸುಡುತ್ತಿದ್ದೇವೆ. ನನ್ನ ವಿಚಾರ, ನನ್ನ ಸಿನಿಮಾ, ನನ್ನ ದೇಶದ ಪರವಾಗಿ ನನಗೆ ಇರುವ ವಿಚಾರಗಳು ಈ ಸಿನಿಮಾದಿಂದ ವ್ಯಕ್ತವಾಗುತ್ತಿವೆ. ಸಿನಿಮಾ ನೋಡಿ ನೀವೇ ನಿರ್ಣಯ ಮಾಡಿ ಈ ಸಿನಿಮಾ ನಮ್ಮನ್ನು ಜೋಡಿಸುವ ಸಂದೇಶ ಹೊಂದಿದೆಯೇಅಥವಾ ಬೇರ್ಪಡಿಸುವ ಸಂದೇಶ ಹೊಂದಿದೆಯೇ ಎಂಬುದನ್ನು ನೀವೇ ನಿರ್ಣಯಿಸಿ’ ಎಂದಿದ್ದಾರೆ ಕಂಗನಾ ರನೌತ್.