ಹಲ್ಲುಗಳು ಮನುಷ್ಯನ ದೇಹದ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಆಹಾರವನ್ನು ಚೆನ್ನಾಗಿ ಅಗೆಯಲು, ಮಾತನಾಡುವಾಗ ಸ್ಪಷ್ಟ ಉಚ್ಛಾರಣೆಗೆ ಮತ್ತು ಮುಖದ ಆಕರ್ಷಕತೆಗೆ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿ, ಅಸಮರ್ಪಕ ಬಾಯಿ ಸ್ವಚ್ಚತೆ ಮತ್ತು ಜೀವನಶೈಲಿಯಿಂದಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಲ್ಲು ಕಪ್ಪಾಗುವುದು, ಹುಳು ತಿನ್ನುವುದು, ಹಲ್ಲು ಉದುರುವುದು ಮೊದಲಾದ ಸಮಸ್ಯೆಗಳನ್ನು ತಡೆಯಲು ಹಲ್ಲುಗಳ ಆರೈಕೆಗೆ ವಿಶೇಷ ಗಮನ ಕೊಡುವುದು ಅಗತ್ಯ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು
ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವುದರಿಂದ ಹಲ್ಲಿನ ಮೇಲೆ ಜಮೆಯಾಗುವ ಆಹಾರ ಅವಶೇಷಗಳು ಹಾಗೂ ಜೀವಾಣುಗಳು ತಕ್ಷಣ ದೂರವಾಗುತ್ತವೆ. ಇದರಿಂದ ಹಲ್ಲುಗಳು ಹೆಚ್ಚು ಆರೋಗ್ಯವಾಗಿರುತ್ತವೆ.
ನೈಸರ್ಗಿಕ ಆಹಾರ ಸೇವನೆ
ಹಣ್ಣುಗಳನ್ನು ಜ್ಯೂಸ್ ಆಗಿ ಕುಡಿಯುವುದಕ್ಕಿಂತ ನೇರವಾಗಿ ತಿನ್ನುವುದು ಹಲ್ಲುಗಳಿಗೆ ಒಳ್ಳೆಯದು. ಸಕ್ಕರೆ ಮಿಶ್ರಿತ ಪಾನೀಯಗಳು ಹಲ್ಲಿನ ಮೇಲ್ಪದರದ ಹಾನಿಗೆ ಕಾರಣವಾಗಬಹುದು.
ಹಲ್ಲಿನ ನಡುವೆ ಸಿಕ್ಕಿಕೊಳ್ಳುವ ಆಹಾರ ಸ್ವಚ್ಛತೆ
ಹಲ್ಲಿನ ನಡುವೆ ಆಹಾರ ಸಿಕ್ಕಿಕೊಂಡರೆ ಚೂಪಾದ ವಸ್ತುಗಳನ್ನು ಬಳಸದೇ ದಂತ ದಾರ (dental floss) ಬಳಸುವುದು ಉತ್ತಮ. ಇದು ಹಲ್ಲಿನ ಗಮ್‌ಗಳಿಗೆ ಹಾನಿ ಆಗದಂತೆ ಸ್ವಚ್ಛಗೊಳಿಸುತ್ತದೆ.
ತಂಪಾದ ಆಹಾರ, ಪಾನೀಯಗಳಿಗೆ ನಿಯಂತ್ರಣ
ಅತಿಯಾಗಿ ತಂಪಾದ ಪಾನೀಯ ಅಥವಾ ಆಹಾರ ಸೇವನೆಯಿಂದ ಹಲ್ಲಿನ ವಸಡುಗಳಲ್ಲಿ ನೋವು, ಸಂವೇದನೆ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಮಿತವಾಗಿಯೇ ಸೇವಿಸಬೇಕು.
ಟೀ, ಕಾಫಿ ನಿಯಂತ್ರಣ
ದಿನಕ್ಕೆ ಎರಡು ಬಾರಿ ಕ್ಕಿಂತ ಹೆಚ್ಚು ಟೀ, ಕಾಫಿ ಸೇವನೆ ಮಾಡಿದರೆ ಹಲ್ಲು ಹಳದಿ ಬಣ್ಣಕ್ಕೆ ತಿರುಗಬಹುದು. ಇದರಲ್ಲಿರುವ ಆಮ್ಲೀಯ ಗುಣ ಹಲ್ಲಿನ ಬಣ್ಣ ಮತ್ತು ದೃಢತೆಗೆ ಹಾನಿ ಉಂಟುಮಾಡುತ್ತದೆ.
ವಿಟಮಿನ್-ಸಿ ಯುಕ್ತ ಆಹಾರ
ವಿಟಮಿನ್-ಸಿ ಇರುವ ಹಣ್ಣು, ತರಕಾರಿಗಳು ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ. ಇವು ಹಲ್ಲುಗಳಿಗೆ ಅಗತ್ಯವಾದ ಆಂಟಿ-ಆಕ್ಸಿಡೆಂಟ್‌ಗಳನ್ನು ಒದಗಿಸುತ್ತವೆ.
ಕೆಟ್ಟ ಅಭ್ಯಾಸಗಳ ನಿವಾರಣೆ
ಉಗುರು ಕಚ್ಚುವ ಅಭ್ಯಾಸದಿಂದ ಬ್ಯಾಕ್ಟೀರಿಯಾಗಳು ಬಾಯಿಗೆ ಹೋಗಿ ಹಲ್ಲಿನ ಮೇಲೆ ಪ್ರಭಾವ ಬೀರುತ್ತವೆ. ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸಬೇಕು.
ಸಾಕಷ್ಟು ನೀರು ಕುಡಿಯುವುದು
ಹೆಚ್ಚು ನೀರು ಕುಡಿಯುವುದರಿಂದ ಬಾಯಿಯಲ್ಲಿ ಉಳಿಯುವ ಆಹಾರದ ಕಣಗಳು ಮತ್ತು ಬಾಯಿ ವಾಸನೆ ಉಂಟುಮಾಡುವ ಅಂಶಗಳು ತಕ್ಷಣ ದೂರವಾಗುತ್ತವೆ.
ಹಲ್ಲುಗಳು ಒಮ್ಮೆ ಹಾಳಾದರೆ ಅವುಗಳನ್ನು ಹಿಂದಿರುಗಿಸಲು ಕಷ್ಟ. ಆದ್ದರಿಂದ ಪ್ರತಿದಿನದ ಸ್ವಚ್ಚತೆ, ಸರಿಯಾದ ಆಹಾರ ಪದ್ಧತಿ ಮತ್ತು ಕೆಟ್ಟ ಅಭ್ಯಾಸಗಳ ನಿವಾರಣೆ ಮೂಲಕ ಹಲ್ಲುಗಳನ್ನು ಆರೋಗ್ಯಕರವಾಗಿಡುವುದು ಅತ್ಯಂತ ಅಗತ್ಯ.