ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ಮಾಡೋಕೆ ಬೋರು ಅಂತಲೂ ಹೊರಗಿನ ಟೇಸ್ಟಿ ಫುಡ್ ತಿನ್ನೋಣ ಅಂತಲೋ ಹೆಚ್ಚು ಆನ್‌ಲೈನ್ ಫುಡ್ ಡೆಲಿವರಿ ತಗೋತೀರಾ?
ಹಾಗಿದ್ರೆ ಖಂಡಿತಾ ಈ ಸುದ್ದಿ ಓದಿ..
ಆಂಧ್ರಪ್ರದೇಶದಲ್ಲಿ ರಾಜೀವ್ ಶುಕ್ಲ ಎನ್ನುವವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಫುಡ್‌ನಲ್ಲಿ ಸತ್ತ ಇಲಿ ಸಿಕ್ಕಿದೆ.
ತುಂಬಾ ಹಸಿವಾಯ್ತು ಅಡುಗೆ ಮಾಡೋಕೆ ಸಮಯ ಇಲ್ಲ ಎಂದು ರಾಜೀವ್ ರೆಸ್ಟೋರೆಂಟ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದಾರೆ. ಎರಡು ಮೂರು ತುತ್ತು ತಿನ್ನುತ್ತಿದ್ದಂತೆಯೇ ಊಟದಲ್ಲಿ ಸತ್ತ ಇಲಿ ಸಿಕ್ಕಿದೆ. ಇದರಿಂದಾಗಿ ವಾಂತಿ, ವಾಕರಿಕೆ ಬಂದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾನು ಬಾರ್ಬೆಕ್ಯೂ ನೇಷನ್‌ನಲ್ಲಿ ವೆಗ್ ಮೀಲ್ ಬಾಕ್ಸ್ ಆರ್ಡರ್ ಮಾಡಿದ್ದೆ. ಊಟದಲ್ಲಿ ಸತ್ತ ಇಲಿ ಸಿಕ್ಕಿದೆ, ೭೫ ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯ್ತು. ಶೀಘ್ರವೇ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.