ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಕರಡು ಬಿಲ್ ಅಂತಿಮ ಮಾಡಿದ ಕೂಡಲೇ ಸುಗ್ರಿವಾಜ್ಞೆ ಜಾರಿ ಆಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರಿವಾಜ್ಞೆ ಜಾರಿ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಗ್ರಿವಾಜ್ಞೆ ಇವತ್ತು ಆಗಬಹುದು ಅನಿಸುತ್ತದೆ. ಸಿಎಂಗೆ ಆರೋಗ್ಯ ತೊಂದರೆ ಇದೆ. ಕರಡು ಬಿಲ್ ಸಿಎಂ ನೋಡಬೇಕು. ಅವರು ನೋಡಿ ಸಹಿ ಹಾಕಬೇಕು. ಅವರು ಸಹಿ ಮಾಡಿ ಡ್ರಾಫ್ಟ್ ಕಳುಹಿಸುತ್ತಾರೆ. ಅದಾದ ಮೇಲೆ ಸುಗ್ರಿವಾಜ್ಞೆ ಜಾರಿ ಆಗುತ್ತದೆ ಎಂದರು.