ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಕರ್ ಪ್ರಶಸ್ತಿ ವಿಜೇತೆ ಸ್ಮೈಲ್ ಪಿಂಕಿ ಖ್ಯಾತಿ ಪಡೆದ ಕಲಾವಿದೆಯ ಮನೆ ಕೆಡವಲು ಅಧಿಕಾರಿಗಳು ನೋಟಿಸ್ ಕಳಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಮಿರ್ಜಾಪುರದಲ್ಲಿರುವ ಪಿಂಕಿ ಸೋಂಕರ್ ಅವರ ಮನೆಯನ್ನು ಕೆಡವಲು ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಪಿಂಕಿಯ ಜೀವನವನ್ನು ಆಧರಿಸಿದ ʻಸ್ಮೈಲ್ ಪಿಂಕಿʼ ಸಾಕ್ಷ್ಯಚಿತ್ರವು 2008 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಿಂಕಿಯನ್ನು ಹೊರತುಪಡಿಸಿ ಆಕೆಯ ಗ್ರಾಮದಲ್ಲಿ ವಾಸಿಸುವ 30 ಜನರಿಗೆ ನೆಲಸಮ ನೋಟಿಸ್ ವಿತರಿಸಲಾಗಿದೆ. ಅಕ್ರಮ ಆಸ್ತಿ ಎಂದು ಬಣ್ಣಿಸಿ ಅರಣ್ಯ ಅಧಿಕಾರಿಗಳು ಮನೆ ನೆಲಸಮಕ್ಕೆ ನೋಟಿಸ್ ನೀಡಿದ್ದಾರೆ.
ಪಿಂಕಿ ಮಿರ್ಜಾಪುರ ಜಿಲ್ಲೆಯ ರಾಂಪುರ ಧಾಭಿ ಗ್ರಾಮದ ನಿವಾಸಿ. ಪಿಂಕಿ ಹಾಗೂ ಇತರ ಕೆಲವು ಗ್ರಾಮಸ್ಥರು ಮನೆ ಕಟ್ಟಿಕೊಂಡಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮನೆ ನಿರ್ಮಿಸುವಾಗ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಗ್ರಾಮಸ್ಥರಿಗೆ ಹೇಳಿರಲಿಲ್ಲ ಎಂದು ಪಿಂಕಿಯ ತಂದೆ ರಾಜೇಂದ್ರ ಸೋಂಕರ್ ಹೇಳಿದ್ದಾರೆ. ಪಿಂಕಿ ಸೋಂಕರ್ ಅವರ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ನೀಡಿದ್ದಾರೆ ಎಂದು ಗ್ರಾಮಸ್ಥರು ವಿವರಿಸಿದರು.
ಧ್ವಂಸ ನೋಟಿಸ್ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ನ್ಯಾಯಯುತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಿರ್ಜಾಪುರ ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್ ಹೇಳಿದ್ದಾರೆ. ತಾರ್ಕಿಕ ಮತ್ತು ನ್ಯಾಯಸಮ್ಮತ ಪರಿಹಾರದ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ, ಯಾರಿಗೂ ತೊಂದರೆಯಾಗದಂತೆ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ತಿಳಿಸಲಾಗಿದೆ.