March 16, 2026
Monday, March 16, 2026
spot_img

Oscars Award | ಈ ಬಾರಿ ಆಸ್ಕರ್ ಗೆದ್ದವರ್ಯಾರು? ಇಲ್ಲಿದೆ ನೋಡಿ ಫುಲ್ ಲಿಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ 98ನೇ ಆಸ್ಕರ್ ಅವಾರ್ಡ್ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್‌ನ ಹಾಲಿವುಡ್ ಸ್ಟುಡಿಯೋದಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಭಾನುವಾರ ರಾತ್ರಿ ನಡೆಯಿತು.

ಹಾಲಿವುಡ್ ಸೇರಿದಂತೆ ವಿಶ್ವದ ವಿವಿಧ ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಸಮಾರಂಭದಲ್ಲಿ ಹಾಜರಿದ್ದು, ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.

ಈ ಬಾರಿ ‘ಸಿನ್ನರ್ಸ್’ ಸಿನಿಮಾ ಒಟ್ಟು 16 ವಿಭಾಗಗಳಲ್ಲಿ ನಾಮಿನೇಷನ್ ಪಡೆದು ವಿಶೇಷ ಗಮನ ಸೆಳೆಯಿತು. ಆಸ್ಕರ್ ಇತಿಹಾಸದಲ್ಲಿ ಒಂದೇ ಸಿನಿಮಾ ಇಷ್ಟು ವಿಭಾಗಗಳಲ್ಲಿ ನಾಮಿನೇಟ್ ಆಗಿರುವುದು ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ‘ಆಲ್ ಅಬೌಟ್ ಈವ್’ ಸಿನಿಮಾ 14 ವಿಭಾಗಗಳಲ್ಲಿ ನಾಮಿನೇಟ್ ಆಗಿ ದಾಖಲೆ ನಿರ್ಮಿಸಿತ್ತು. ‘ಸಿನ್ನರ್ಸ್’ ಹಲವು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ:

ಇದೇ ವೇಳೆ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದಿತು. ‘ಟೈಟಾನಿಕ್’ ಖ್ಯಾತಿಯ ಲಿಯನಾರ್ಡೋ ಡಿಕ್ಯಾಪ್ರಿಯೊ ನಟಿಸಿರುವ ಈ ಚಿತ್ರವನ್ನು ಪೌಲ್ ಥಾಮಸ್ ಆಂಡರ್ಸನ್ ನಿರ್ದೇಶಿಸಿದ್ದಾರೆ. ಈ ಚಿತ್ರ ಒಟ್ಟು ಆರು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ.

ಪ್ರಮುಖ ಪ್ರಶಸ್ತಿ ವಿಜೇತರು:

ಅತ್ಯುತ್ತಮ ಸಿನಿಮಾ: ‘ಒನ್ ಬ್ಯಾಟಲ್ ಆಫ್ಟರ್ ಅನದರ್’

ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿ (‘ಹ್ಯಾಮ್ನೆಟ್’)

ಅತ್ಯುತ್ತಮ ನಟ: ಮೈಕಲ್ ಬಿ. ಜೋರ್ಡನ್ (‘ಸಿನ್ನರ್ಸ್’)

ಅತ್ಯುತ್ತಮ ಒರಿಜಿನಲ್ ಸಾಂಗ್: ‘ಗೋಲ್ಡನ್’

ಅತ್ಯುತ್ತಮ ಛಾಯಾಗ್ರಹಣ: ‘ಸಿನ್ನರ್ಸ್’

ಅತ್ಯುತ್ತಮ ಸಿನಿಮಾ ಎಡಿಟಿಂಗ್: ‘ಒನ್ ಬ್ಯಾಟಲ್ ಆಫ್ಟರ್ ಅನದರ್’

ಅತ್ಯುತ್ತಮ ಸೌಂಡ್: ‘ಎಫ್1’

ಅತ್ಯುತ್ತಮ ಸಂಗೀತ ಸಂಯೋಜನೆ: ‘ಸಿನ್ನರ್ಸ್’

ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್: ‘ಆಲ್ ದಿ ಎಂಪ್ಟಿ ರೂಮ್’

ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ಸ್: ‘ಅವತಾರ್: ಫೈರ್ ಆ್ಯಂಡ್ ಆ್ಯಶ್’

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !