October 10, 2026
Saturday, October 10, 2026
spot_img

ಬಾಕ್ಸ್ ಆಫೀಸ್ ನಲ್ಲಿ ಧುರಂಧರ್ 2 ಅಬ್ಬರ: ಭಾರತದಲ್ಲೆಯೇ ಗಳಿಸಿದ್ರು ಬರೋಬ್ಬರಿ 1000 ಕೋಟಿ ರೂಪಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧರ್ ಜೋಡಿ ಇಂದು ದೇಶ ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದ್ದು, ಅದಕ್ಕೆ ಕಾರಣ ‘ಧುರಂಧರ್ 2’ ಸಿನಿಮಾ.

ಇಂದು ಧುರಂಧರ್ ಹೊಸ ಇತಿಹಾಸವನ್ನೇ ಬರೆದಿದ್ದು, ಭಾರತೀಯ ಬಾಕ್ಸ್ ಆಫೀಸ್ ನಲ್ಲೆ ಬರೋಬ್ಬರಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದ್ದು , ಈ ಮೂಲಕ ಬಾಲಿವುಡ್ ನಲ್ಲಿಯೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರ್ಚ್ 19ರಂದು ತೆರೆಕಂಡಸಿನಿಮಾ, ಮೂರನೇ ವಾರದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ‘ಧುರಂಧರ್ 2’ ಸಿನಿಮಾ ಮೊದಲ ವಾರ 674 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ವಾರ 263.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಮೂಲಕ ಇದುವರೆಗೆ ಭಾರತದಲ್ಲಿ 1,209 ಕೋಟಿ ರೂಪಾಯಿ ಬಾಚಿಕೊಂಡಿದೆ.

ಈಗಾಗಲೇ ಭಾರತದಲ್ಲಿ ‘ಆರ್​ಆರ್​ಆರ್​’ 782.20 ಕೋಟಿ ರೂ. ‘ಕಲ್ಕಿ 2898 AD’ 646 ಕೋಟಿ ರೂ., ‘ಕೆಜಿಎಫ್: ಚಾಪ್ಟರ್ 2’ 859.70 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ಈ ಎಲ್ಲಾ ಗಳಿಕೆಯನ್ನು ದಾಟಿ ಮುನ್ನುಗುತ್ತಿದ್ದು, ಮುಂದಿನ ದಿನಗಳಲ್ಲಿ ಬಾಹುಬಲಿ 2 ಸಿನಿಮಾದ 1,030 ಕೋಟಿ ರೂಪಾಯಿ ಹಾಗೂ ‘ಪುಷ್ಪ 2’ ಸಿನಿಮಾದ 1,234 ಕೋಟಿ ರೂ. ದಾಖಲೆಯನ್ನು ಮೀರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

Must Read