ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಹಿಂದೆ ಪಾಕಿಸ್ತಾನದ ಸಂಸತ್ನಲ್ಲಿ ಹಾಡಿಹೊಗಳಲಾಗಿತ್ತು. ಇದೀಗ ಮೋದಿ ಅವರನ್ನು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಬಲ ನಾಯಕ ಹಾಗೂ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಸಾಜಿದ್ ತರಾರ್ ಹೇಳಿದ್ದಾರೆ.
ಮೋದಿ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಒಳ್ಳೆಯ ನಾಯಕ, ಪಾಕಿಸ್ತಾನಕ್ಕೂ ಅವರಂತಹ ನಾಯಕ ಸಿಗಲಿ ಎಂದು ಹೇಳಿದ್ದಾರೆ.
ಮೋದಿ ಒಬ್ಬ ಅದ್ಭುತ ನಾಯಕ. ಅವರು ಹುಟ್ಟು ನಾಯಕ. ಪಾಕಿಸ್ತಾನ ಸಂಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಅವರು ಎಲ್ಲಾ ರಾಜಕೀಯ ಗೊಂದಲಗಳನ್ನು ಬಿಟ್ಟು ನಮ್ಮ ದೇಶದೊಂದಿಗೆ ಮಾತುಕತೆ ಮತ್ತು ವ್ಯಾಪಾರವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಸಾಜಿದ್ ತರಾರ್ ಹೇಳಿದರು.
ಭಾರತಕ್ಕೆ ಶಾಂತಿಯುತ ಪಾಕಿಸ್ತಾನದ ಅಗತ್ಯವಿದೆ, ಅವರು ಖಂಡಿತವಾಗಿಯೂ ಮೂರನೇ ಶ್ರೇಷ್ಠ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.