ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ ಸಾವು ಹಲವು ಅನುಮಾನ, ಚರ್ಚೆಗೆ ಗ್ರಾಸವಾಗಿದೆ. ಸಿಜೆ ರಾಯ್ ನಿನ್ನೆ ತಮ್ಮ ಕಚೇರಿಯ ಕೋಣೆಯಲ್ಲಿ ಎದೆಗೆ ಗುಂಡು ಹಾರಿಸಿ ದುರಂತ ಅಂತ್ಯಕಂಡಿದ್ದರು.
ಇಂದು ವಿದೇಶದಲ್ಲಿದ್ದ ಸಿಜೆ ರಾಯ್ ಕುಟುಂಬಸ್ಥರು ಆಗಮಿಸಿದ್ದಾರೆ. ಇದರ ನಡುವೆ ಪತ್ರ ಸಿಜೆ ರೋಹಿತ್ ರಾಯ್ ಮಹತ್ವದ ಸಂದೇಶ ರವಾನಿಸಿದ್ದಾರೆ.
ತಂದೆ ಸಾವಿನ ಬಗ್ಗೆ ಪುತ್ರ ರೋಹಿತ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ನಮ್ಮ ತಂದೆ ಡಾ. ರಾಯ್ ಸಿ.ಜೆ. ಒಬ್ಬ ದಾರ್ಶನಿಕರಾಗಿದ್ದರು. ಅವರ ಜೀವನವು ಶ್ರೇಷ್ಠತೆ, ಸಹಾನುಭೂತಿಯಿಂದ ಗುರುತಿಸಲ್ಪಟ್ಟಿದೆ. ಅಸಾಧಾರಣ ಮನಸ್ಸು ಮತ್ತು ಅನೇಕರಿಗೆ ಮಾರ್ಗದರ್ಶಕತಾಗಿದ್ದರು ಎಂದು ರೋಹಿತ್ ರಾಯ್ ಹೇಳಿದ್ದಾರೆ.
ತಮ್ಮ ಬುದ್ಧಿವಂತಿಕೆಯಿಂದ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದರು. ಪ್ರನಿಜವಾದ ಯಶಸ್ಸು ಇತರರನ್ನು ಮೇಲಕ್ಕೆತ್ತುವುದರಲ್ಲಿ ಅಡಗಿದೆ ಎಂದು ತೋರಿಸಿಕೊಟ್ಟರು. ಶ್ರಮ, ಪ್ರಯತ್ನ, ನಿರಂತರ ಹೋರಾಟಗಳಿಂದ ಹಲವು ಉದ್ಯಮಿಗಳಿಗೆ ದಾರಿ ದೀಪವಾಗಿದ್ದಾರೆ ಎಂದು ರೋಹಿತ್ ರಾಯ್ ಹೇಳಿದ್ದಾರೆ.
ಸಿಜೆ ರಾಯ್ ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿದೆ. ನಾಳೆ (ಫೆ.01) ಬೆಳಗ್ಗೆ ಬೌರಿಂಗ್ ಆಸ್ಪತ್ರೆಯಿಂದ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಕಾನ್ಫಿಡೆಂಟ್ ಗ್ರೂಪ್ ಮಾಲೀಕತ್ವದ ಬನ್ನೇರುಘಟ್ಟ ರಸ್ತೆಯ ನೇಚರ್ಸ್ ಲಕ್ಸುರಿ ರೆಸಾರ್ಟ್‌ನಲ್ಲಿ ಬೆಳಗ್ಗೆ 10ರಿಂದ 2ರವರೆಗೆ ರಾಯ್ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಾಳೆ (ಫೆ.01) ಮಧ್ಯಾಹ್ನ 2 ಗಂಟೆಗೆ ಕಲ್ಕೆರೆಯ ಸೇಂಟ್ ಜೋಸೆಫ್ಸ್ ಸಿರೋ ಮಲಬಾರ್ ಚರ್ಚ್ ನಲ್ಲಿ ಅಂತಿಮ ವಿಧಿವಿಧಾನ ಪಕ್ರಿಯೆ ನಡೆಯಲಿದೆ. ಬಳಿಕ ನೇಚರ್ಸ್ ಲಕ್ಸುರಿ ರೆಸಾರ್ಟ್ ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.



