August 8, 2026
Saturday, August 8, 2026
spot_img

ನಮ್ಮ ಮೆಟ್ರೋ ಪಿಂಕ್ ಲೈನ್ ಇಂಟೆನ್ಸಿವ್ ಟೆಸ್ಟಿಂಗ್: ಎರಡು ದಿನ ರೈಲುಗಳ ಸುರಕ್ಷತಾ ತಪಾಸಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋ ಫೇಸ್-2 ಅಡಿಯಲ್ಲಿ ಬಹುನಿರೀಕ್ಷಿತ ಪಿಂಕ್ ಲೈನ್ (ಕಾಳೇನ ಅಗ್ರಹಾರದಿಂದ ನಾಗವಾರ) ಕಾರಿಡಾರ್‌ನ ವಾಣಿಜ್ಯ ಸಂಚಾರದ ಸಿದ್ಧತೆಗಳು ಕೊನೆಯ ಹಂತಕ್ಕೆ ತಲುಪಿವೆ.

ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿರುವ ಹೊಸ ಮೆಟ್ರೋ ರೈಲುಗಳ ತಾಂತ್ರಿಕ ಹಾಗೂ ಸುರಕ್ಷತಾ ತಪಾಸಣೆಯನ್ನು ಆಗಸ್ಟ್ 12 ರಿಂದ 14 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕೋರಿಕೆಯ ಮೇರೆಗೆ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು ಈ ರೋಲಿಂಗ್ ಸ್ಟಾಕ್ ತಪಾಸಣೆಯನ್ನು ಕೈಗೊಳ್ಳಲಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕೋರಿಕೆಯ ಮೇರೆಗೆ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು ಈ ರೋಲಿಂಗ್ ಸ್ಟಾಕ್ (ರೈಲು ಪೆಟ್ಟಿಗೆಗಳು) ತಪಾಸಣೆಯನ್ನು ಕೈಗೊಳ್ಳಲಿದ್ದಾರೆ. ಪಿಂಕ್‌ ಲೈನ್‌ಗಾಗಿ ಬಿಇಎಂಎಲ್‌ ಪೂರೈಸಿರುವ ಹೊಸ ರೈಲು ಸೆಟ್‌ಗಳನ್ನು ಕೊತ್ತನೂರು ಡಿಪೋದಲ್ಲಿ ತೀವ್ರ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗುವುದು. ರೈಲುಗಳ ಬ್ರೇಕಿಂಗ್ ಸಿಸ್ಟಮ್, ಸಿಗ್ನಲಿಂಗ್ ತಂತ್ರಜ್ಞಾನದೊಂದಿಗಿನ ಸಮನ್ವಯತೆ ಮತ್ತು ಸ್ವಯಂಚಾಲಿತ ಚಾಲನಾ ಸಾಮರ್ಥ್ಯಗಳನ್ನು ತಜ್ಞರ ತಂಡವು ಪರಿಶೀಲಿಸಲಿದೆ.

ಪಿಂಕ್ ಲೈನ್ ಒಟ್ಟು 21.3 ಕಿಲೋಮೀಟರ್ ಉದ್ದವಿದ್ದು, ಇದರಲ್ಲಿ 7.5 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 13.8 ಕಿ.ಮೀ ಅಂಡರ್​ ಗ್ರೌಂಡ್ ಮಾರ್ಗ ಒಳಗೊಂಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ನಿಲ್ದಾಣಗಳನ್ನು ಹೊಂದಿರುವ ಎತ್ತರಿಸಿದ ಮಾರ್ಗವು ಈಗಾಗಲೇ ಆರ್‌ಡಿಎಸ್‌ಒ ವೇಗ ತಪಾಸಣೆಯಲ್ಲಿ ಗಂಟೆಗೆ 90 ಕಿಮೀ ವೇಗದ ಸರ್ಟಿಫಿಕೇಟ್ ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !