ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದ ಮೆಟ್ರೋ ಟ್ರ್ಯಾಕ್ ಮೇಲೆ ಮರದ ಕೊಂಬೆ ಬಿದ್ದ ಕಾರಣ ವ್ಯತ್ಯಯಗೊಂಡಿದ್ದ ನಮ್ಮ ಮೆಟ್ರೋ ಸೇವೆ ಪುನರಾರಂಭವಾಗಿದೆ.
ನಿನ್ನೆ, ಕರ್ನಾಟಕದಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾಗಿದೆ.
“ಇಂದು ಸಂಪೂರ್ಣ ಪರ್ಪಲ್ ಲೈನ್ನಲ್ಲಿ ಸೇವೆಯ ಸಾಮಾನ್ಯ ಸ್ಥಿತಿಯನ್ನು ಪುನರಾರಂಭವಾಗಿದೆ ಮತ್ತು ಚಲ್ಲಘಟ್ಟದಿಂದ ವೈಟ್ಫೀಲ್ಡ್ಗೆ ವೇಳಾಪಟ್ಟಿಯ ಪ್ರಕಾರ ರೈಲುಗಳು ಚಲಿಸುತ್ತಿವೆ” ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.
ಮುಂದಿನ 48 ಗಂಟೆಗಳ ಕಾಲ ಕರ್ನಾಟಕದಲ್ಲಿ ಮಳೆಯೊಂದಿಗೆ ಭಾಗಶಃ ಮೋಡ ಕವಿದ ವಾತಾವರಣವಿದೆ ಎಂದು IMD ಮುನ್ಸೂಚನೆ ನೀಡಿದೆ.