ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋದ ಹಳದಿ ಮಾರ್ಗ ಇಂದಿನಿಂದ ಕಾರ್ಯಾರಂಭಿಸಿದೆ. ಭಾನುವಾರ (ಆ.10) ಪ್ರಧಾನಿ ಮೋದಿಯವರಿಂದ ಚಾಲನೆಯಾದ ಬಳಿಕ ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.
ಇಂದು ಬೆಳಿಗ್ಗೆ 6:30ರಿಂದಲೇ ಮೊದಲ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಿದೆ. ಬೆಳಿಗ್ಗೆ 6:30ಕ್ಕೆ ಬೊಮ್ಮಸಂದ್ರದಿಂದ ಮೊದಲ ಮೆಟ್ರೋ ಪ್ರಾರಂಭವಾದರೆ, ಬೆಳಿಗ್ಗೆ 7:10ಕ್ಕೆ ಆರ್ವಿ ರಸ್ತೆಯಿಂದ ಮೊದಲ ಮೆಟ್ರೋ ಆರಂಭವಾಗಿದೆ. ಪ್ರತಿ 25 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಆರ್ವಿ ರಸ್ತೆ ಟು ಬೊಮ್ಮಸಂದ್ರದವರೆಗೆ ಸಂಚರಿಸಲಿವೆ.
ರಾತ್ರಿ 10:42ಕ್ಕೆ ಬೊಮ್ಮಸಂದ್ರದಿಂದ ಹಾಗೂ ರಾತ್ರಿ 11:55ಕ್ಕೆ ಆರ್ವಿ ರಸ್ತೆಯಿಂದ ಕೊನೆಯ ರೈಲು ಸಂಚರಿಸಲಿದೆ. ಇನ್ನೂ ಪ್ರತಿದಿನ ರಾತ್ರಿ 10 ಗಂಟೆ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.