ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಳ ಇತಿಹಾಸ ಇರುವ ನಮ್ಮ ಮೈಸೂರು ಸ್ಯಾಂಡಲ್ ಸೋಪ್‌ನ ಲುಕ್ ಬದಲಾಗಿದೆ. ಜಾಗತಿಕವಾಗಿ ಬ್ರ್ಯಾಂಡ್ ಆಗುವುದಕ್ಕೆ ತಯಾರಾಗಿರುವ ಮೈಸೂರ್ ಸ್ಯಾಂಡಲ್ ತನ್ನ ಎಲಿಗೆನ್ಸ್‌ನ್ನು ಹಾಗೇ ಉಳಿಸಿಕೊಂಡು ಮುನ್ನಡೆಯಲು ಸಿದ್ಧವಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಮುಂದಾಗಿದೆ. ಐಕಾನಿಕ್ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ 150 ಗ್ರಾಂ ತೂಕದ ‘ಮೈಸೂರು ಸ್ಯಾಂಡಲ್ ಮಿಲೇನಿಯಮ್ ಸೂಪರ್ ಪ್ರೀಮಿಯಂ ಸೋಪ್’ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದರ ಬೆಲೆ ರೂ. 3,000 ರು ಆಗಿದೆ.
“ಕಲಾ ಲೋಕ – ಕರ್ನಾಟಕದ ನಿಧಿ” ಎಂದು ಬ್ರಾಂಡ್ ಮಾಡಲಾದ ಈ ಸೋಪ್ ಉತ್ತಮ ಗುಣಮಟ್ಟದ ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಿಸಲ್ಪಟ್ಟಿದೆ. ಇದು ವಿಮಾನ ನಿಲ್ದಾಣಗಳಲ್ಲಿನ ಅಂಗಡಿಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಬೇಡಿಕೆಯ ಆಧಾರದ ಮೇಲೆ ರಫ್ತು ಮಾಡಲಾಗುತ್ತದೆ. ಈ ಐಷಾರಾಮಿ ಸೋಪಿಗಾಗಿ ವಿಶೇಷ ಪ್ಯಾಕ್ ವಿನ್ಯಾಸಗೊಳಿಸಿದೆ, ತನ್ನ ಸಾಮಾನ್ಯ ಹಸಿರು, ಕೆಂಪು ಮತ್ತು ಹಳದಿ ಥೀಮ್‌ನಿಂದ ದೂರ ಸರಿದಿದೆ.
ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಸೋಪ್ ಗುಲಾಬಿ ಮತ್ತು ಕ್ರೀಮ್ ಪ್ಯಾಕ್‌ನಲ್ಲಿ ಬರುತ್ತದೆ, ಉತ್ಪನ್ನವು ವಿದೇಶಿ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವುದರಿಂದ, ಪ್ರತಿ ಪೆಟ್ಟಿಗೆಯಲ್ಲಿ ‘ಮೈಸೂರು ಸ್ಯಾಂಡಲ್‌ನ ಕಥೆ’ಯನ್ನು ವಿವರಿಸುವ ಕಾರ್ಡ್ ಇರುತ್ತದೆ.