ಲಂಡನ್‌ ಫ್ಲೈಟ್‌ ಹತ್ತಿದ ನಮ್ಮ ನೇರಳೆ ಹಣ್ಣು, ಇದೇ ಫಸ್ಟಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮ್ಮ ಮನೆ ಮುಂದೆ, ಹಳ್ಳಿಗಳ ಗುಡ್ಡಗಳಲ್ಲಿ ಸಿಗುವ ನೇರಳೆ ಹಣ್ಣುಗಳು ಇದೀಗ ಲಂಡನ್‌ ಫ್ಲೈಟ್‌ ಹತ್ತಿವೆ. ಹೌದು,  ಬೇಸಿಗೆ ಕಾಲದಲ್ಲಿ ಫಲ ಬಿಡುವ ನೇರಳೆ ಹಣ್ಣು ತಿನ್ನಲು ಬಲು ರುಚಿ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಕೂಡ ಇವೆ.

ಈ ಕಾರಣದಿಂದ ಹಣ್ಣು ಬೇರೆ ದೇಶಗಳಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಇದಕ್ಕೆ ಬೆಲೆ ಸ್ವಲ್ಪ ಹೆಚ್ಚು. ಹಳ್ಳಿ ಭಾಗಗಳಲ್ಲಿ ಗುಡ್ಡಗಳಲ್ಲಿ ನೇರಳೆ ಹಣ್ಣಿನ ಮರಗಳಿರುವುದು ಸಾಮಾನ್ಯ.

ಇಂತಹ ನೇರಳೆ ಹಣ್ಣಿಗೆ ಈಗ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಲಂಡನ್ ಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತದೆ.

ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದಿಂದ ಲಂಡನ್ ಗೆ ತಾಜಾ ನೇರಳೆ ಹಣ್ಣುಗಳ ರಫ್ತಿಗೆ ಚಾಲನೆ ನೀಡಿದೆ.

ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!