ರಾಯಲ್‌ ಆಗಿ ಬೆಂಗಳೂರಿಗೆ ಎಂಟ್ರಿ ಕೊಟ್ಟ ನಮ್ಮ ಟೀಂ, ಕೈಯಲ್ಲಿ ದೊಡ್ಡ ಕಪ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಕಪ್ ಗೆದ್ದ ಆರ್‌ಸಿಬಿ ತಂಡ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಲು ತವರಿಗೆ ಬಂದಿಳಿದಿದೆ.

ಹೆಚ್‌ಎಎಲ್‌ಗೆ ವಿಶೇಷ ವಿಮಾನದಲ್ಲಿ ಆರ್‌ಸಿಬಿ ಆಟಗಾರರು ಬಂದಿಳಿದಿದ್ದು, ಜೊತೆಗೆ ಎಬಿಡಿ ಹಾಗೂ ಕ್ರಿಸ್ ಗೇಲ್ ಸಹ ಬಂದಿದ್ದಾರೆ. ಆರ್‌ಸಿಬಿ ಟೀಂನ ಕೈಯಲ್ಲಿ ಜನರು ನೋಡಲು ಕಾತರದಿಂದ ಕಾದಿರುವ ದೊಡ್ಡ ಟ್ರೋಫಿ ಕೂಡ ಇದೆ.

ಅಹಮದಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಆರ್‌ಸಿಬಿ ಆಟಗಾರರು ಹೊರಟು ಮಧ್ಯಾಹ್ನ 2:10ಕ್ಕೆ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣ ತಲುಪಿದ್ದಾರೆ. ಇಲ್ಲಿಂದ ಆರ್‌ಸಿಬಿ ತಂಡ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ತೆರಳಲಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟ್ರೋಫಿ ನೀಡಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!