ಖರ್ಗೆ ಪ್ರಧಾನಿ ಆಗಬೇಕು ಅನ್ನೋದು ನಮ್ಮ ಆಶಯ: ಬಸವರಾಜ ರಾಯರಡ್ಡಿ

ಹೊಸದಿಗಂತ ವರದಿ ಹುಬ್ಬಳ್ಳಿ:

ದಲಿತರ ಮೇಲೆ ಕಾಳಜಿ ಇರುವ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಖರ್ಗೆ ಅವರು ಪ್ರಧಾನಿ ಆಗಲಿ ಎಂಬುವುದು ನಮ್ಮ ಆಶಯ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸೆಂಪ್ಟಬರ್‌ಗೆ ೭೫ ವರ್ಷ ಪೂರೈಸಲಿದ್ದಾರೆ. ಬಿಜೆಪಿ ನಿಯಮದಂತೆ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದರಿಂದ ರಾಜಕೀಯದಲ್ಲಿ ಬದಲಾವಣೆ ಆಗಬಹುದು. ಬಿಜೆಪಿ ಬಹುಮತಕ್ಕೆ ಬೆಂಬಲ ನೀಡಿದ ಜೆಡಿಯು ಹಾಗು ಟಿಡಿಪಿ ಹಿಂದೆ ಸರಿಯುವುದರಲ್ಲಿ ಅಚ್ಚರಿಇಲ್ಲ. ಆಗ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಬಹುದು. ಆಗ ಖರ್ಗೆ ಅವರು ಪ್ರಧಾನಿಯಾಗಬಹುದು ಎಂದು ಅಭಿಪ್ರಾಯ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಛಲವಾದಿ ನಾರಾಯಣ ಸ್ವಾಮಿ, ಖರ್ಗೆ ಅವರ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಖರ್ಗೆ ಅವರಿಗೆ ಸರಿಸಾಟಿ ನಾಯಕರು ಮತ್ತೊಂಬ್ಬರಿಲ್ಲ. ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರಿದ್ದಾರೆ. ಖರ್ಗೆ ಅವರಿಗೆ ಪ್ರಧಾನಿ ಆಗುವ ಅವಕಾಶ ನೀಡಬಹುದು. ಹಿಂದೆ ಸೋನಿಯಾ ಗಾಂಽ ಅವರು ಮನಮೋಹನ ಸಿಂಗ್ ಅವರಿಗೆ ನೀಡಿದ್ದರು. ಕಾಂಗ್ರೆಸ್‌ನಲ್ಲಿ ತ್ಯಾಗದ ಮನೋಭಾವವಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆ, ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ ಅವರ ಹೆಸರು ಪ್ರಸ್ತಾಪಿಸಿಲ್ಲ ಎಂಬ ಚಿಲ್ಲರೆ ಆರೋಪಗಳ ಮಾಡುವುದರಲ್ಲಿ ವಿರೋಧ ಪಕ್ಷಗಳು ಕಾಲ ಕಳೆಯುತ್ತಿವೆ. ಅವರಿಗೆ ಅಭಿವೃದ್ಧಿ ಹಾಗೂ ಆರ್ಥಿಕಕತೆ ಬಗ್ಗೆ ಮಾತನಾಡಲು ಎಷ್ಟೋ ವಿಷಯವಿದ್ದರು ಜನರ ದಾರಿ ತಪ್ಪಿಸಲು ಇಂತಹ ವಿಷಯಗಳ ಪ್ರಸ್ತಾಪಿಸುತ್ತಾರೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!