ನಮ್ಮದು ‘ಐರನ್ ಬದ್ರರ್ಸ್‌’ ಸಂಬಂಧ: ಪಾಕ್‌ಗೆ ಬೆಂಬಲ ಪುನರುಚ್ಚರಿಸಿದ ಡ್ರ್ಯಾಗನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿಯ ಬಳಿಕ ಭಾರತ ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ಚೀನಾ, ಇಸ್ಲಾಮಾಬಾದ್‌ಗೆ ಮತ್ತೊಮ್ಮೆ ತನ್ನ ಬೆಂಬಲ ಸೂಚಿಸಿ ನಿಜಬಣ್ಣ ಜಗತ್ತಿಗೆ ತೋರಿಸಿದೆ.

ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್, ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯನ್ನು ಭೇಟಿ ಮಾಡಿ ಭಾರತ ಜೊತೆಗಿನ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ್ದಾರೆ.

ಈ ಸಂದರ್ಭ ಪಾಕ್ ಅಧ್ಯಕ್ಷ ಜರ್ದಾರಿ, ಪಹಲ್ಗಾಮ್ ಘಟನೆಗೆ ಸಂಬಂಧಿಸಿ ಭಾರತದ ಪ್ರತಿಕ್ರಿಯೆಯನ್ನು ಬೇಜವಾಬ್ದಾರಿ ಮತ್ತು ಆಕ್ರಮಣಕಾರಿ ಎಂದು ಕರೆದಿದ್ದಾರೆ.

ಜೈಡಾಂಗ್ ಮಾತನಾಡಿ, ಚೀನಾ ಮತ್ತು ಪಾಕಿಸ್ತಾನದ ನಡುವಿನ ಶಾಶ್ವತ ಸ್ನೇಹವನ್ನು ಪುನರುಚ್ಚರಿಸಿದರಲ್ಲದೆ, ಚೀನಾ ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂದು ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ನಮ್ಮದು ಸವಾಲಿನ ಸಮಯದಲ್ಲಿ ಯಾವಾಗಲೂ ಪರಸ್ಪರ ಬೆಂಬಲಿಸಿದ ‘ಐರನ್ ಬದ್ರರ್ಸ್‌’ ಎಂದು ಸಂಬಂಧ ಎಂದು ಬಣ್ಣಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here