ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಿಜೆಪಿ ಬಣ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವಕ್ಫ್ ವಿವಾದ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಣ, ಅದು ಬಿಜೆಪಿ ಬಣ. ಮಾಧ್ಯಮಗಳಲ್ಲಿ ಕೆಲವೊಂದನ್ನು ಬಿಂಬಿಸಲಾಗ್ತಿದೆ ಎಂದು ಬಣ ಬಡಿದಾಟ ಕುರಿತು ಸ್ಪಷ್ಟನೆ ನೀಡಿದ್ದಾರೆ.
ವಕ್ಫ್ ಬೋರ್ಡ್ ವಿಚಾರದಲ್ಲಿ ಎರಡನೇ ಹಂತದ ಹೋರಾಟ ಮಾಡುತ್ತೇವೆ. ಜ.4 ರಂದು ಬಳ್ಳಾರಿಯ ಕಂಪ್ಲಿಯಲ್ಲಿ ಸಮಾವೇಶ ಮಾಡ್ತೇವೆ. ವಕ್ಫ್ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಅಂತ ನಾವು ಹೋರಾಟ ಮಾಡ್ತೇವೆ ಎಂದು ತಿಳಿಸಿದ್ದಾರೆ.