ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಂಡ್ ಮೇಲೆ ಅಲಿ ಸೋಲು ಗೆಲುವು ಸಹಜ. ಈ ಆಟದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗಾಗಲೇ ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ.
ಉದಾಹರಣೆಗೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯವನ್ನೇ ನಾವು ತೆಗೆದುಕೊಂಡರೆ, ಈ ಪಂದ್ಯದಲ್ಲಿ ಉಭಯ ತಂಡದ ಬ್ಯಾಟ್ಸ್ಮನ್ ಉತ್ತಮ ರನ್ ಕಲೆಹಾಕಿದ್ದಾರೆ .
Incredible: 6 wickets in an over! I do not know any other instance in any form of cricket pic.twitter.com/rsYwmBhCs0
— Sarang Bhalerao (@bhaleraosarang) December 2, 2022
ಆದರೆ ಈ ಇಂದು ನಡೆದ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ದಾಖಲಾಗಿಲ್ಲ. ಬದಲಿಗೆ, ಮಹಾರಾಷ್ಟ್ರದಲ್ಲಿ ನಡೆದ ಟೆನಿಸ್ ಬಾಲ್ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಪನ್ವೇಲ್ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬೌಲರೊಬ್ಬರು ಓವರ್ನ ಆರು ಎಸೆತಗಳಲ್ಲಿ ಆರು ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಎದುರಾಳಿ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿಯೇ ಈ ಅದ್ಭುತ ಸೃಷ್ಟಿಯಾಗಿದೆ.