ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಯುವಕನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತ ಯುವಕ. ಮುಜಮಿಲ್ ಸತ್ತಿಗೇರಿ ಹತ್ಯೆ ಮಾಡಿದ ಆರೋಪಿ.
ಹತ್ಯೆಯಾದ ಇಬ್ರಾಹಿಂಗೂ ಅದೇ ಬಡಾವಣೆಯ ಮುಜಮಿಲ್ ಸತ್ತಿಗೇರಿ ಎಂಬುವವನ ಸಹೋದರಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಹಿಂದೆ ವಾರ್ನಿಂಗ್ ಕೊಟ್ಟಿದ್ದ ಎನ್ನಲಾಗಿದೆ. ಆದರೂ ಪ್ರೀತಿ, ಪ್ರೇಮ ಅಂತಾ ಮುಜಮಿಲ್ ಸಹೋದರಿಯಿಂದ ಬಿದ್ದಿದ್ದ. ಇಂದು ಸಹೋದರಿಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದನ್ನು ನೋಡಿ ಇಬ್ರಾಹಿಂನ ಬೆನ್ನಟ್ಟಿ ಸ್ಕ್ರೂಡ್ರೈವರ್‌ನಿಂದ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.